ಮಂಗಳೂರು: ರೈಲು ಡಿಕ್ಕಿ- ಅಪರಿಚಿತ ವ್ಯಕ್ತಿ ಮೃತ್ಯು
ಮಂಗಳೂರು,ಮಾ.2: ಉಳ್ಳಾಲ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿ ದಾಟುತ್ತಿದ್ದಾಗ ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ.
ಮಂಗಳವಾರದಂದು ಉಳ್ಳಾಲ ರೈಲ್ವೆ ನಿಲ್ದಾಣದ ಸಮೀಪದಲ್ಲಿಯೆ ತಿರುಗಾಡುತ್ತಿದ್ದ ಈ ವ್ಯಕ್ತಿ ಬುಧವಾರದಂದು ಕೇರಳಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಮೃತವ್ಯಕ್ತಿಯು ಅಂದಾಜು 60 ವರ್ಷ ಪ್ರಾಯದವರಾಗಿದ್ದು 5.5 ಅಡಿ ಎತ್ತರವಿದ್ದಾರೆ. ಗೋಧಿ ಮೈಬಣ್ಣದ ಈ ವ್ಯಕ್ತಿ ಉತ್ತಮ ಮೈಕಟ್ಟು ಹೊಂದಿದ್ದಾರೆ.ಮಲಯಾಲಂ ಭಾಷೆಯಲ್ಲಿ ಮಾತನಾಡುತ್ತಿದ್ದರು. ಬಿಳಿ ಪಂಚೆ , ತಿಳಿ ಹಸಿರು ಬಣ್ಣದ ಉದ್ದನೆಯ ತೋಳಿನ ಶರ್ಟ್ ಧರಿಸಿದ್ದರು . ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





