ಯಕ್ಷಗಾನ ಕಲಾರಂಗದಿಂದ ಐದನೆ ಮನೆ ಕೊಡುಗೆ

ಉಡುಪಿ, ಮಾ.2: ಉಡುಪಿಯ ಯಕ್ಷಗಾನ ಕಲಾರಂಗ ಅಮಾಸೆಬೈಲು ಸಮೀಪದ ರಟ್ಟಾಡಿಯಲ್ಲಿರುವ ವಿದ್ಯಾಪೋಷಕ್ ಫಲಾನುಭವಿ ಬಡ ವಿದ್ಯಾರ್ಥಿನಿ ಅಶ್ವಿನಿ ಕುಲಾಲಳಿಗೆ ಕಟ್ಟಿಸಿಕೊಟ್ಟ ಮನೆ ‘ವಿದ್ಯಾಸದನ’ದ ಉದ್ಘಾಟನೆ ರವಿವಾರ ನಡೆಯಿತು.
ನಿವೃತ್ತ ಸರಕಾರಿ ಉದ್ಯೋಗಿ ಕೆ. ಬಾಲಕೃಷ್ಣ ರಾವ್ ಹಾಗೂ ವಿಶ್ವನಾಥ್ ಶೆಣೈ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸಂಸ್ಥೆಯು ರಚನಾತ್ಮಕ ಕಾರ್ಯಗಳಿಂದ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದೆ ಎಂದರು. ಮನೆಯ ಸಂಪೂರ್ಣ ಪ್ರಾಯೋಜಕತ್ವ ವಹಿಸಿಕೊಂಡ ಸಂಸ್ಥೆಯ ಉಪಾಧ್ಯಕ್ಷ ಎಂ. ಗಂಗಾಧರ್ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರು ಮೇಸ್ತ್ರಿ ಲಕ್ಷ್ಮಣ ನಾಯ್ಕಿ, ಮರದ ಕೆಲಸ ನಿರ್ವಹಿಸಿದ ಮಂಜುನಾಥ್ ಆಚಾರ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪಿ.ಕಿಶನ್ ಹೆಗ್ಡೆ, ಎಚ್.ಎನ್.ಶೃಂಗೇಶ್ವರ್, ಮನೋಹರ್ ಕೆ., ವಿ.ಜಿ.ಶೆಟ್ಟಿ, ಕೆ.ಅಜಿತ್‌ಕುಮಾರ್, ವಿದ್ಯಾಪ್ರಸಾದ್, ಪೃಥ್ವಿರಾಜ್ ಕವತ್ತಾರು, ಅಶೋಕ್ ಎಂ, ಕೆ. ಗೋಪಾಲ್, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ ಮುಂತಾದ ವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು.





