ಭಾರತೀಯನ ಜೈಲು ಶಿಕ್ಷೆ ರದ್ದುಪಡಿಸಲು ನಿರಾಕರಿಸಿದ ನ್ಯಾಯಾಲಯ
ವಾಶಿಂಗ್ಟನ್, ಮಾ. 2: ಲೈಂಗಿಕ ದೌರ್ಜನ್ಯ ಪ್ರಕರಣ ವೊಂದರಲ್ಲಿ ತನಗೆ ವಿಧಿಸಲಾಗಿರುವ ಒಂಬತ್ತು ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಭಾರತೀಯನೊಬ್ಬ ಸಲ್ಲಿಸಿದ ಮೇಲ್ಮನವಿಯನ್ನು ಅಮೆರಿಕದ ನ್ಯಾಯಾಲಯವೊಂದು ತಿರಸ್ಕರಿಸಿದೆ.
28 ವರ್ಷದ ಗುರ್ವಿಂದರ್ ಸಿಂಗ್‌ನ ಮೆಲ್ಮನವಿಯನ್ನು ಸ್ವೀಕರಿಸಲು ಓಹಿಯೊದ ಸುಪ್ರೀಂ ಕೋರ್ಟ್ ಕಳೆದ ತಿಂಗಳು ನಿರಾಕರಿಸಿತು.
ಮಹಿಳೆಯೊಬ್ಬರನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಲೋಗನ್ ಕೌಂಟಿ ಕಾಮನ್ ಪ್ಲೀಸ್ ನ್ಯಾಯಾಲಯವೊಂದು 2015 ಫೆಬ್ರವರಿಯಲ್ಲಿ ನೀಡಿದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.
2013ರಲ್ಲಿ ಸ್ಟೋಕ್ಸ್ ಟೌನ್‌ಶಿಪ್‌ನ ವಲೇರೊ ಗ್ಯಾಸ್ ಸ್ಟೇಶನ್‌ನಲ್ಲಿ ಆತ ಕೆಲಸ ಮಾಡುತ್ತಿದ್ದಾಗ ಘಟನೆ ಸಂಭವಿಸಿತ್ತು. ಪ್ರಸಕ್ತ ಆತ ಜೈಲಿನಲ್ಲಿದ್ದಾನೆ.
Next Story





