ಎಂಎಚ್370 ವಿಮಾನದ ಅವಶೇಷ ಮೊಝಾಂಬಿಕ್‌ನಲ್ಲಿ ಪತ್ತೆ?
ಲಂಡನ್, ಮಾ. 2: ಎರಡು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಅವಶೇಷಗಳು ಮೊಝಾಂಬಿಕ್‌ನಲ್ಲಿ ತೇಲಿಬಂದಿವೆ ಎಂದು ಹೇಳಲಾಗಿದೆ.
ವಿಮಾನ ನಾಪತ್ತೆಯಾಗಿ ಎರಡು ವರ್ಷಗಳು ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿಯಿರುವಾಗ ಪೂರ್ವ ಆಫ್ರಿಕದ ದೇಶದ ಸಮುದ್ರ ದಂಡೆಯಲ್ಲಿ ಬೋಯಿಂಗ್ 777 ವಿಮಾನದ್ದೆಂದು ಹೇಳಲಾದ ವಸ್ತುವೊಂದು ಪತ್ತೆಯಾಗಿದೆ.
ಮಲೇಶ್ಯದ ಕೌಲಾಲಂಪುರದಿಂದ ಬೀಜಿಂಗ್‌ಗೆ 239 ಪ್ರಯಾಣಿಕರನ್ನು ಹೊತ್ತುಕೊಂಡು ಹಾರುತ್ತಿದ್ದ ವಿಮಾನ 2014 ಮಾರ್ಚ್ 8ರಂದು ನಿಗೂಢವಾಗಿ ನಾಪತ್ತೆಯಾಗಿತ್ತು.
ಈಗ ಮೊಝಾಂಬಿಕ್‌ನಲ್ಲಿ ಪತ್ತೆಯಾಗಿರುವ ವಿಮಾನ ಅವಶೇಷದ ಚಿತ್ರಗಳನ್ನು ಮಲೇಶ್ಯ, ಆಸ್ಟ್ರೇಲಿಯ ಮತ್ತು ಅಮೆರಿಕದ ತನಿಖಾಧಿಕಾರಿಗಳು ವೀಕ್ಷಿಸಿದ್ದು, ಅದು ಕಾಣೆಯಾಗಿರುವ ವಿಮಾನದ ಅವಶೇಷವಾಗಿರುವ ಸಾಧ್ಯತೆ ಹೆಚ್ಚಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Next Story





