ಬ್ರೆಝಿಲ್‌ನಲ್ಲಿ 641 ಮೈಕ್ರೋಸೆಫಲಿ ಪ್ರಕರಣ
ಬೆಸೀಲಿಯ (ಬ್ರೆಝಿಲ್), ಮಾ. 2: ಬ್ರೆಝಿಲ್‌ನಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಝಿಕಾ ವೈರಸ್‌ನ ಸೋಂಕು ಹರಡಿದಂದಿನಿಂದ 641 ಮೈಕ್ರೋಸೆಫಲಿ (ಗರ್ಭಿಣಿಯರು ವಿಕೃತ ತಲೆ ಮತ್ತು ಸಣ್ಣ ಮೆದುಳಿನ ಮಕ್ಕಳಿಗೆ ಜನ್ಮ ನೀಡುವುದು) ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪೈಕಿ 139 ಶಿಶುಗಳು ಸಾವನ್ನಪ್ಪಿವೆ.
ದಾಖಲಾಗಿರುವ ಇತರ 4,222 ಸಂಭಾವ್ಯ ಮೈಕ್ರೋಸೆಫಲಿ ಪ್ರಕರಣಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Next Story





