ನಾಳೆಯಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು, ಮಾ.2: ವೆಲೆನ್ಸಿಯಾದ ಸ್ಕೂಲ್ ಆ್ ಸೋಶಿ ಯಲ್ ವರ್ಕ್ ರೋಶನಿ ನಿಲಯದಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಯುಜಿಸಿ ಸಹಯೋಗದಲ್ಲಿ ‘ಸಮಾಜ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಶಿಕ್ಷಣ’ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮಾ.4 ಮತ್ತು 5ರಂದು ನಡೆಯಲಿದೆ.
ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ರಮೀಳಾ ಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.4ರಂದು ಬೆಳಗ್ಗೆ 9:45ಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೆನಾ ಕಾರ್ಯಕ್ರಮ ಉದ್ಘಾಟಿಸುವರು.
ಯುನೆಸ್ಕೋದ ನೀತಿ ತತ್ವ ಸಲಹಾ ತಜ್ಞ ಡಾ.ಪೀಟರ್ ಜಿ.ಕಿರ್ಶಲೇಗರ್ ಯೇಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ನಿರ್ದೇಶಕಿ ಡಾ.ಫಿಲೋಮಿನಾ ಡಿಸೋಜ, ವಿಚಾರ ಸಂಕಿರಣದ ಜತೆ ಕಾರ್ಯದರ್ಶಿ ಶೈಲಜಾ ಸಂತೋಷ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Next Story





