ಭಾರತದ ಮಹಿಳಾ ತಂಡ ಪ್ರಧಾನ ಸುತ್ತಿಗೆ ಲಗ್ಗೆ
ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಶಿಪ್
ಕೌಲಾಲಂಪುರ, ಮಾ.2: ಕ್ರೊವೇಷಿಯ ತಂಡವನ್ನು 3-0 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ತಂಡ ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಧಾನ ಸುತ್ತಿಗೆ ಪ್ರವೇಶಿಸಿದೆ.
ಬುಧವಾರ ನಡೆದ ಕ್ರೊವೇಷಿಯ ವಿರುದ್ಧದ ಪಂದ್ಯದಲ್ಲಿ ಮನಿಕಾ ಬಾತ್ರಾ, ವೌಮಾ ದಾಸ್ ಹಾಗೂ ಕೆ. ಶಮಿನಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಲಿಯಾ ರಾಕೊವಾರನ್ನು 11-8, 12-10, 8-11, 11-6 ಸೆಟ್‌ಗಳ ಅಂತರದಿಂದ ಮಣಿಸಿದ ಮನಿಕಾ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು.
ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಯುಯಾನ್ ಟಿಯಾನ್‌ರನ್ನು 13-11, 9-11, 11-8, 11-2 ಸೆಟ್‌ಗಳ ಅಂತರದಿಂದ ಸೋಲಿಸಿದ ವೌಮಾ ದಾಸ್ ಭಾರತದ ಮುನ್ನಡೆಯನ್ನು 2-0ಕ್ಕೇರಿಸಿದರು.
ಮೂರನೆ ಸಿಂಗಲ್ಸ್‌ನಲ್ಲಿ ಶಾಮಿನಿ ಅವರು ಇವಾನಾ ಟುಬಿಕನೆಕ್‌ರನ್ನು 14-12, 11-8, 7-11, 11-3 ಸೆಟ್‌ಗಳ ಅಂತರದಿಂದ ಸೋಲಿಸಿ ಭಾರತಕ್ಕೆ 3-0 ಅಂತರದ ಗೆಲುವು ತಂದುಕೊಟ್ಟರು.
Next Story





