ಪಾಂಡವಪುರ: ಅಪರಿಚಿತ ಶವ ಪತ್ತೆ
ಪಾಂಡವಪುರ, ಮಾ.2: ತಾಲೂಕಿನ ಕೆನ್ನಾಳು ಗ್ರಾಮದ ಹೊರವಲಯದ ಜಮೀನಿನ ಮರವೊಂದರಲ್ಲಿ ನೇಣು ಬಿಗಿದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಬುಧವಾರ ಮುಂಜಾನೆ ಪತ್ತೆಯಾಗಿದೆ.
ವ್ಯಕ್ತಿಯ ಶವ ಗ್ರಾಮದ ಪಟ್ಟದರಾಣಿ ದೇವಾಲಯದ ಹತ್ತಿರವಿರುವ ಪುಟ್ಟಸ್ವಾಮಿಗೌಡರ ಜಮೀನಿನ ಮರದಲ್ಲಿ ನೇಣುಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು, ಆತನ ಕೈಮೇಲೆ ಮಂಜುಳಾ ಮತ್ತು ನಳಿನಿ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾನೆ.
ವ್ಯಕ್ತಿಯ ಶವವನ್ನು ಪಾಂಡವಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಿಸುದಾರರಿದ್ದಲ್ಲಿ ಪಾಂಡವಪುರ ಪೊಲೀಸ್ ಠಾಣೆ (08236-255132)ಯನ್ನು ಸಂಪರ್ಕಿಸಬಹುದಾಗಿದೆ.
Next Story





