ದರೋಡೆ ಪ್ರಕರಣ ಐವರಿಗೆ ಕಠಿಣ ಶಿಕ್ಷೆ ವಿಸಿ ತೀರ್ಪು
ತುಮಕೂರು, ಮಾ.2: ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು-ಕೆಸ್ತೂರು ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ದಂಪತಿಯಿಂದ ಹಣ ಸಹಿತ ಚಿನ್ನಾಭರಣಗಳನ್ನು ದರೋಡೆ ಮಾಡಿದ ಆರೋಪದ ಮೇಲೆ ಐವರು ದರೋಡೆಕೋರರಿಗೆ ಇಲ್ಲಿನ 6ನೆ ಅಪರ ಜಿಲ್ಲಾ ಸತ್ರ ನ್ಯಾಯಾೀಶರಾದ ಕೆ.ಎಸ್.ಭರತ್‌ಕುಮಾರ್ ದಂಡ ಸಹಿತ ಕಠಿಣ ಶಿಕ್ಷೆ ವಿಸಿ ತೀರ್ಪು ನೀಡಿದ್ದಾರೆ. ಎಚ್.ಆರ್.ಮಾರುತಿ, ನವೀನ್‌ಕುಮಾರ್, ಗುರುಪ್ರಸಾದ್, ಈರಣ್ಣ ಹಾಗೂ ಮಧುಸೂಧನ್ ಅವರೇ ಶಿಕ್ಷೆಗೊಳಗಾದ ಐವರು ಆರೋಪಿಗಳು. ೋರಾ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರು-ಕೆಸ್ತೂರು ರಸ್ತೆ ಮಾರ್ಗದಲ್ಲಿ 2014ರ ನ.4ರಂದು ರಾತ್ರಿ 10:45ರ ಸುಮಾರಿಗೆ ಮದುವೆ ಮುಗಿಸಿಕೊಂಡು ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದ ಲಿಂಗರಾಜು ಹಾಗೂ ಪವಿತ್ರ ದಂಪತಿಯನ್ನು ಆರೋಪಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ, ನಗದು, ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ೋರಾ ಪೊಲೀಸ್ ಠಾಣೆ ಸಿಪಿಐ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಐವರು ಆರೋಪಿಗಳು ದರೋಡೆಯಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ರುಜುವಾತಾಗಿರುವುದರಿಂದ ಶಿಕ್ಷೆಗೆ ಗುರಿಪಡಿಸಲಾಗಿದೆ.ರೋಪಿ ಮಾರುತಿಗೆ ಕಲಂ 397 ಐಪಿಸಿ ಅನ್ವಯ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 25,000 ರೂ. ದಂಡ ವಿಸಿರುವುದಲ್ಲದೆ ಗಾಯಾಳು ಲಿಂಗರಾಜುಗೆ 10 ಸಾವಿರ ರೂ. ಪರಿಹಾರ ನೀಡಲು ಆದೇಶ ನೀಡಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗೆ 5 ವರ್ಷಗಳ ಕಠಿಣ ಶಿಕ್ಷೆ, ತಲಾ 25 ಸಾವಿರ ರೂ. ದಂಡ ವಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಕೆ.ಎಚ್.ಶ್ರೀಮತಿ ವಾದ ಮಂಡಿಸಿದ್ದರು.





