ಬೇರೆ ಇಲಾಖೆ ನೌಕಕರ ನಿಯುಕ್ತಿಗೆ ವಿರೋಧ ಕಂದಾಯ ಇಲಾಖೆ ನೌಕರರಿಂದ ಪ್ರತಿಭಟನೆ
ಮೈಸೂರು, ಮಾ.2: ಉಪ-ತಹಶೀಲ್ದಾರ್ ಮತ್ತು ಶಿರಸ್ತೇದಾರ್ ಹುದ್ದೆಗೆ ಬೇರೆ ಇಲಾಖೆಯಿಂದ ವಿಲೀನಗೊಳಿಸಿರುವ ನೌಕರರ ನಿಯುಕ್ತಿ ಆದೇಶದ ವಿರುದ್ಧ ಕಂದಾಯ ಇಲಾಖೆಯ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸಿದ್ದು, ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ಕಂದಾಯ ಇಲಾಖೆಯ ನೌಕರರು ಜಿಲ್ಲಾಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದ ನಂತರ ಪ್ರಾದೇಶಿಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ಹೊರಟು ಮನವಿ ಸಲ್ಲಿಸಿದರು. ಪ ತಹಶೀಲ್ದಾರ್ ಮತ್ತು ಶಿರಸ್ತೇದಾರ್ ಹುದ್ದೆಗೆ ಬೇರೆ ಇಲಾಖೆಯಿಂದ ವಿಲೀನಗೊಳಿಸಿರುವ ನೌಕರರ ಸ್ಥಳ ನಿಯುಕ್ತಿ ಆದೇಶವನ್ನು ರದ್ದುಪಡಿಸಿ, ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೂಕ್ತ ನಿರ್ದೇಶನ ನೀಡಬೇಕೆಂದು ಕಂದಾಯ ಸಚಿವರನ್ನು ಮನವಿ ಮಾಡಿದರು.ದೇ ಸಂದರ್ದಲ್ಲಿ ಮಾತನಾಡಿದ ಕಂದಾಯ ನೌಕರರ ಸಂಘದ ಅಧ್ಯಕ್ಷೆ ಎಂ.ವಿ.ಗೀತಾ, ರಾಜ್ಯದಲ್ಲಿ ಉಪ ತಹಶೀಲ್ದಾರ್ ಮತ್ತು ಶಿರಸ್ತೇದಾರ್ ಹುದ್ದೆಗಳು ಖಾಲಿ ಇರುವುದನ್ನು ಉಪಯೋಗಿಸಿಕೊಂಡು ಕಂದಾಯ ಇಲಾಖೆಯ ಬುನಾದಿ ಹಂತದ ಅನುಭವ ಇಲ್ಲದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳನ್ನು ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಹುದ್ದೆಗೆ ವಿಲೀನಗೊಳಿಸಿರುವುದನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕೆಂಚಯ್ಯ, ಉಪಾಧ್ಯಕ್ಷ ಸಿ.ಯೋಹನ, ಖಜಾಂಚಿ ಲಕ್ಷ್ಮೀ ನಾರಾಯಣ, ಬಿ.ರಾಮಚಂದ್ರ, ನಿಸಾರ್ ಅಹ್ಮದ್, ನಾಗೇಶ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.





