ತುಮಕೂರು: ಗ್ರಾಪಂ ನೌಕರರಿಂದ ಧರಣಿ, ಕನಿಷ್ಠ ವೇತನಕ್ಕೆ ಒತ್ತಾಯ

ತುಮಕೂರು, ಮಾ.2: ಗ್ರಾಮ ಪಂಚಾಯ ತ್‌ಗಳಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರಿಗೆ ಸರಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಜಾರಿ ಮಾಡಿ ಸೇವೆಗೆ ಸೇರಿದ ದಿನದಿಂದ ನೌಕರರಿಗೆ ಅನುಮೋದನೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಎದುರು ಧರಣಿ ನಡೆಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ. ನಾಗೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸಿ ಹೋರಾಟಗಳನ್ನು ನಡೆಸಿದ ಭಾಗವಾಗಿ ಹೋರಾಟಕ್ಕೆ ಮಣಿದ ಸರಕಾರ ಕನಿಷ್ಠ ವೇತನ ಜಾರಿ ಮಾಡಿದೆ.ದರೆ, ಸರಕಾರ ನಿಗದಿಮಾಡಿರುವ ಕನಿಷ್ಠ ವೇತನವನ್ನು ಪಂಚಾಯತ್‌ಗಳಲ್ಲಿ ಇದುವರೆಗೂ ಜಾರಿ ಮಾಡಿಲ್ಲ. ಬದಲಾಗಿ ಅನುಮೋದನೆ ಆಗಿರುವ ನೌಕರರಿಗೆ ಒಂದು ರೀತಿಯ ವೇತನ, ಅನುಮೋದನೆ ಆಗದಿರುವ ನೌಕರರಿಗೆ ಇನ್ನೊಂದು ರೀತಿಯ ವೇತನವನ್ನು ನೀಡುವ ಮೂಲಕ ನೌಕರರಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದನ್ನು ಕೈಬಿಟ್ಟು ಎಲ್ಲಾ ನೌಕರರಿಗೂ ಒಂದೇ ರೀತಿಯ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಾಲಿ ಇರುವ ಬಿಲ್‌ಕಲೆಕ್ಟರ್ ಹುದ್ದೆಗೆ ಗ್ರಾಮ ಪಂಚಾಯತ್‌ನ ಇತರೆ ಸಿಬ್ಬಂದಿ ವರ್ಗದವರಿಗೆ ಭಡ್ತಿ ನೀಡುವ ಮೂಲಕ ಹುದ್ದೆಯನ್ನು ತುಂಬಬೇಕು ಎಂದು ಆಗ್ರಹಿಸಿದರು.ಲ್ಲಾಧ್ಯಕ್ಷರಾದ ಎನ್.ಕೆ.ಸುಬ್ರಮಣ್ಯ ಮಾತನಾಡಿ, ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು ಬರುವ ವೇತನದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಗಲು ರಾತ್ರಿ ಎನ್ನದೆ ಗ್ರಾಮ ಪಂಚಾಯತ್‌ನ ನೀರು ವಿತರಕರು, ಕಸ ಗುಡಿಸುವವರು, ಬಿಲ್‌ಕಲೆಕ್ಟರ್ ಸೇರಿದಂತೆ ಇತರೆ ವಿಭಾಗದ ನೌಕರರು ಕನಿಷ್ಠ ಕೂಲಿ ಇಲ್ಲದೆ ದುಡಿಯುತ್ತಿದ್ದಾರೆ.
ಭವಿಷ್ಯವರ್ತಿ ಅನುಮೋದನೆಗೆ ಬದಲಾಗಿ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ಅನುಮೋದನೆ ಮಾಡಬೇಕು. ಈ ಬಗ್ಗೆ ಸರಕಾರದ ಹಂತದಲ್ಲಿ ಮಾತುಕತೆ ಮುಗಿದಿದ್ದು, ಸರಕಾರ ಒಪ್ಪಿಗೆ ಸೂಚಿಸಿದೆ. ಬಿಲ್‌ಕಲೆಕ್ಟರ್ ಹುದ್ದೆಯಿಂದ ಕಾರ್ಯದರ್ಶಿ-2 ಹುದ್ದೆಗೆ ಪದೋನ್ನತಿ ನೀಡಲು ಜೇಷ್ಠತಾ ಪಟ್ಟಿ ತಯಾರು ಮಾಡಬೇಕಾಗಿರುವ ಜಿಲ್ಲಾ ಪಂಚಾಯತ್ ಕಳೆದ ಮೂರು ವರ್ಷಗಳಿಂದ ಈ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ಸಿಇಒ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸುಬ್ಬರಾಯಪ್ಪ, ಸಿದ್ದೇಶ್ವರಪ್ಪ, ಸುಬ್ರಮಣ್ಯ, ಶಂಕರ್, ಸೋಮಶೇಖರ, ಡಾಟಾ ಎಂಟ್ರಿ ಆಪರೇಟರ್ ರಾಜೇಶ್ವರಿ, ರೇಖಾ, ಚೇತನ ಕುಮಾರಿ, ಮಂಜುಳಮ್ಮ ಮತ್ತಿತರರು ಪಾಲ್ಗೊಂಡಿದ್ದರು.







