ಪ್ರೊ ಕಬಡ್ಡಿ: ಪುಣೇರಿ,ಮುಂಬೈಗೆ ಜಯ
ನಾಳೆ ಹೊಸದಿಲ್ಲಿಯಲ್ಲಿ ಸೆಮಿಫೈನಲ್
ಮುಂಬೈ, ಮಾ.2: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಹಾಲಿ ಚಾಂಪಿಯನ್ ಯು ಮುಂಬಾ ತಂಡಗಳು ಜಯಭೇರಿ ಬಾರಿಸಿವೆ.
ಲೀಗ್‌ನ 55ನೆ ಪಂದ್ಯದಲ್ಲಿ ಪುಣೇರಿ ತಂಡ ಬಂಗಾಲ ವಾರಿಯರ್ಸ್ ತಂಡವನ್ನು 43-19 ಅಂತರದಿಂದ ಮಣಿಸಿತು. ಈಗಾಗಲೇ ನಾಕೌಟ್ ಹಂತಕ್ಕೆ ತಲುಪಿರುವ ಪುಣೇರಿ ತಂಡ ಒಟ್ಟು 48 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದೊಂದಿಗೆ ಲೀಗ್ ಹಂತವನ್ನು ಪೂರೈಸಿದೆ.
ಲೀಗ್‌ನ 56ನೆ ಪಂದ್ಯದಲ್ಲಿ ಯು ಮುಂಬಾ(36) ತಂಡ ಡೆಲ್ಲಿ ದಬಾಂಗ್ ತಂಡವನ್ನು (20) 16 ಅಂಕಗಳ ಅಂತರದಿಂದ ಮಣಿಸಿತು. ಅಂಕಪಟ್ಟಿಯಲ್ಲಿ ಒಟ್ಟು 60 ಅಂಕ ಗಳಿಸಿ ಅಗ್ರ ಸ್ಥಾನಕ್ಕೇರಿದೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ಮೊದಲ ಸೆಮಿಫೈನಲ್‌ನಲ್ಲಿ ಯೂ ಮುಂಬಾ ಹಾಗೂ ಬಂಗಾಲ ವಾರಿಯರ್ಸ್, ಎರಡನೆ ಸೆಮಿಫೈನಲ್‌ನಲ್ಲಿ ಪಾಟ್ನಾ ಪೈರಟ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿಯಾಗಲಿವೆ.
Next Story





