ಇಂದು ಚಲನಚಿತ್ರ ಸಾಧಕರಿಗೆ ಸನ್ಮಾನ
ಬೆಂಗಳೂರು,ಮಾ.2: ‘ಕನ್ನಡ ವಾಕ್ಚಿತ್ರ’ ಹುಟ್ಟು ಹಬ್ಬದ ಅಂಗವಾಗಿ ಕನ್ನಡ ಚಲನಚಿತ್ರ ಅಕಾಡಮಿ ವತಿಯಿಂದ ಮಾ.3ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಚಲನಚಿತ್ರ ಸಿಂಹಾವಲೋಕನ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮೂಲ ಸೌಲಭ್ಯ ಹಾಗೂ ಸಾರ್ವಜನಿಕ ಸಂಪರ್ಕ ಮತ್ತು ಹಜ್ ಖಾತೆ ಸಚಿವ ರೋಷನ್‌ಬೇಗ್ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಸಾ.ರಾ.ಗೋವಿಂದು, ವಸತಿ ಸಚಿವ ಅಂಬರೀಶ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್‌ಬಾಬು, ಲೋಕಸಭೆ ಸದಸ್ಯ ಪಿ.ಸಿ.ಮೋಹನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಆರ್. ನಾಗೇಂದ್ರರಾವ್ ಪ್ರಶಸ್ತಿ, ಅಭಿನಯಕ್ಕಾಗಿ ಎಸ್.ಕೆ.ಪದ್ಮಾದೇವಿ. ಬಿ.ಆರ್.ಪಂತುಲು ಪ್ರಶಸ್ತಿ, ನಿರ್ದೇಶನಕ್ಕಾಗಿ ಜೋಸೈಮನ್, ಡಿ.ಶಂಕರ್ ಪ್ರಶಸ್ತಿ, ನಿರ್ಮಾಪಕರಿಗೆ ಎಚ್.ಎನ್.ಮುದ್ದುಕೃಷ್ಣ., ಜಿ.ವಿ.ಅಯ್ಯರ್ ಪ್ರಶಸ್ತಿ ಸಂಗೀತಕ್ಕಾಗಿ ರತ್ನಂ, ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ, ಹಾಡುಗಳಿಗಾಗಿ ಬಿ.ಎ.ಮಧು, ಬಿ.ಎಸ್.ರಂಗಾ ಪ್ರಶಸ್ತಿ, ಛಾಯಾಗ್ರಹಣಕ್ಕಾಗಿ ಬಿ.ಎಸ್.ಬಸವರಾಜು, ಬಿ.ಜಯಮ್ಮ ಪ್ರಶಸ್ತಿ, ಅತ್ಯುತ್ತಮ ಪ್ರದರ್ಶಕರಿಗಾಗಿ ಬಾಬ್ಜಿ, ಎಂ.ಪಿ.ಶಂಕರ್ ಪ್ರಶಸ್ತಿ, ತಂತ್ರಜ್ಞಾನಕ್ಕೆ ಆರ್ಮುಗಂ, ತೂಗುದೀಪ ಶ್ರೀನಿವಾಸ್ ಪ್ರಶಸ್ತಿ, ಅತ್ಯುತ್ತಮ ಖಳನಾಯಕಕ್ಕಾಗಿ ಜೈ ಜಗದೀಶ್, ಕೆ.ಎನ್.ಟೈಲರ್ ಪ್ರಶಸ್ತಿ, ಪ್ರಾದೇಶಿಕ ಭಾಷೆಗೆ ರಿಚರ್ಡ್ ಕಾಸ್ಟೋಲಿನ್ ಆಯ್ಕೆಯಾಗಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







