ನಾಳೆ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್‌ರಿಗೆ ಅಭಿನಂದನಾ ಸಮಾರಂಭ

ಮೂಡುಬಿದಿರೆ, ಮಾ.3: ಸಮಸ್ತ ಕೇರಳ ಜಮೀಯ್ಯತ್ತುಲ್ ಉಲಮಾದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶೈಖುಲ್ ಜಾಮಿಯಾ, ಕಾಸರಗೋಡು ಖಾಝಿ, ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಶೈಖುನಾ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್‌ರಿಗೆ ಮಾ.5ರಂದು ಮಗ್ರಿಬ್ ನಮಾಝ್ ಬಳಿಕ ತೋಡಾರು ಜಂಕ್ಷನ್‌ನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜು, ಎಸ್ಕೆಎಸ್ಸೆಸ್ಸೆಫ್ ಕೈಕಂಬ ಹಾಗೂ ಮೂಡುಬಿದಿರೆ ವಲಯದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶೈಖುನಾ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಉಸ್ಮಾನುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು. ಕೇರಳದ ಹಾಶಿಂ ಅರಿಲ್ ಭಾಷಣಗೈಯಲಿದ್ದಾರೆ ಎಂದು ಕಾಲೇಜಿನ ಕಾರ್ಯಕಾರಿ ಕಾರ್ಯದರ್ಶಿ ಇಸ್ಹಾಕ್ ತೋಡಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





