ಶಾರದಾ ಚಿಟ್ ಫಂಡ್ ಹಗರಣ ;ಮಾಜಿ ವಿತ್ತ ಸಚಿವ ಚಿದಂಬರಂ ಪತ್ನಿ ನಳಿನಿಗೆ ಸಿಬಿಐ ಸಮನ್ಸ್

ಹೊಸದಿಲ್ಲಿ, ಮಾ.4: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪತ್ನಿ ನಳಿನಿ ಅವರಿಗೆ ಮಾ.10ರಂದು ಕೋಲ್ಕತಾದ ಸಿಬಿ ಕಚೇರಿಗೆ ಹಾಜರಾಗುವಂತೆ ಶುಕ್ರವಾರ ಕೇಂದ್ರ ತನಿಖಾ ದಳ (ಸಿಬಿಐ) ಸಮನ್ಸ್ ಜಾರಿ ಮಾಡಿದೆ.
ಹಿಂದಿನ ಸಿಬಿಐ ಶಾರದಾ ಹಗರಣದಲ್ಲಿ ಸಲ್ಲಿಸಿದ ಆರನೇ ಪೂರಕ ಆರೋಪ ಪಟ್ಟಿಯಲ್ಲಿ ನಳಿನಿ ಅವರ ಹೆಸರಿದೆ.
ಆರೋಪಪಟ್ಟಿಯಲ್ಲಿ ನಳಿನಿ ಅವರು ಸಾಕ್ಷಿ ಅಥವಾ ಆರೋಪಿ ಎಂದು ಸ್ಪಷ್ಟಪಡಿಸಿಲ್ಲ.ಆದರೆ ವಿವಾದಾತ್ಮಕ ಚಾನೆಲ್ ಒಪ್ಪಂದಕ್ಕೆ ಸಂಬಂಧಿಸಿ ನಳಿನಿ ಸಿಕ್ಕಿ ಹಾಕಿಕೊಂಡಿದ್ದಾರೆ.
Next Story





