ಕನ್ಹಯ್ಯಾ ಹೋರಾಟದ ಪ್ರೇರಣಾ ಶಕ್ತಿಯಾಗಲಿ

ದೇಶದ್ರೋಹದ ಆರೋಪವನ್ನು ಹೊರಿಸಿ, ಜೈಲಿಗೆ ತಳ್ಳಿ ತನ್ನ ಧ್ವನಿಯನ್ನು ಅಡಗಿಸಲೆತ್ನಿಸಿದ ವ್ಯವಸ್ಥಿತ ಷಡ್ಯಂತ್ರದಿಂದ ಆರೋಪಮುಕ್ತನಾಗಿ ಹೊರಬಂದ ಇಪ್ಪತ್ತರ ಆಸುಪಾಸಿನ ಬಿಸಿ ರಕ್ತದ ಯುವಕ ಕನ್ನಯ್ಯ ಇಷ್ಟೊಂದು ಸಹಾನುಭೂತಿಯಿಂದ, ಬುದ್ಧಿವಂತಿಕೆಯಿಂದ, ಉತ್ಕುಟತೆಯಿಂದ ದೇಶ ಎದುರಿಸುತ್ತಿರುವ ನಿಜವಾದ ಸವಾಲುಗಳು ಮತ್ತು ಆತಂಕಗಳ ಬಗ್ಗೆ ಮಾತನಾಡಿದ್ದು ನೋಡಿದಾಗ ಯುವ ಭಾರತದ ಪ್ರಜೆಯಾಗಿರುವುದಕ್ಕೆ ನನಗೆ ಬಹಳಷ್ಟು ಹೆಮ್ಮಯಾಯಿತು.ನಿರಂಕುಶ ಆಡಳಿತ ಆಳ್ವಿಕೆ ನಡೆಸುವಂತಾಗುವುದು ಒಳ್ಳೆಯ ಜನರು ಮೌನದಿಂದಿರುವುದರಿಂದ ಎನ್ನುವುದನ್ನು ಇತ್ತೀಚಿನ ಇತಿಹಾಸ ನಮಗೆ ತೋರಿಸಿಕೊಟ್ಟಿರುವಾಗ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು, ಪ್ರಶ್ನಿಸುವ ಹಕ್ಕನ್ನು, ಚರ್ಚೆ, ಸಂವಾದಗಳನ್ನು ಉಳಿಸಲು ಮತ್ತು ಆಡಳಿತ ವರ್ಗದ ಶೋಷಣೆಗಳ ವಿರುದ್ಧ ನಿರ್ಭೀತಿಯಿಂದ ಹೋರಾಡಲು ಕನ್ಹಯ್ಯಾ ಪ್ರೇರಕ ಶಕ್ತಿಯಾಗುತ್ತಾನೆ ಎಂಬ ನಿರೀಕ್ಷೆ ನನ್ನದು.
Next Story





