ಪಂಚ ರಾಜ್ಯಗಳಲ್ಲಿ ಎ.4ರಿಂದ ಮೇ 16ರ ತನಕ ಆರು ಹಂತಗಳಲ್ಲಿ ಚುನಾವಣೆ
ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಚುನಾವಣಾ ದಿನಾಂಕ ನಿಗದಿ

ಹೊಸದಿಲ್ಲಿ, ಮಾ.4: ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿಯಲ್ಲಿ ಎ.4ರಿಂದ ಮೇ 16ರ ತನಕ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ನಜೀಮ್ ಜೈದಿ ಇಂದು ಸುದ್ದಿಗೊಷ್ಠಿಯಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ಐದು ರಾಜ್ಯಗಳಲ್ಲಿ 824 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 17 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಕೇರಳ
ಒಟ್ಟು ಕ್ಷೇತ್ರಗಳು: 140
ಅಧಿಸೂಚನೆ: ಎ.22
ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ: ಎ.29
ನಾಮಪತ್ರ ಪರಿಶೀಲನೆ: ಎ.30
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಮೇ 2
ಚುನಾವಣೆ: ಮೇ 16
ಅಸ್ಸಾಂ
ಒಟ್ಟು ಕ್ಷೇತ್ರಗಳು :126
ಹಂತಗಳು :2 , ಚುನಾವಣೆ: ಎ.4, 11
ಪಶ್ಚಿಮ ಬಂಗಾಳ
ಒಟ್ಟು ಕ್ಷೇತ್ರಗಳು :294
ಹಂತಗಳು :6
ಚುನಾವಣೆ : ಎ.4, 11, 17, 21,25, 30, ಮೇ 5
ತಮಿಳುನಾಡು
ಒಟ್ಟು ಕ್ಷೇತ್ರಗಳು :234
ಹಂತಗಳು :1 , ಚುನಾವಣೆ: ಮೇ 16
ಪುದುಚೇರಿ
ಒಟ್ಟು ಕ್ಷೇತ್ರಗಳು :30
ಹಂತಗಳು :1 , ಚುನಾವಣೆ: ಮೇ 16
ಫಲಿತಾಂಶ ಪ್ರಕಟ : ಮೇ 19







