ಮಾಜಿ ಸೈನಿಕ ಶಿವಪ್ಪ ನಾಯ್ಕರ ಮೇಲೆ ಹಲ್ಲೆ: ಪುತ್ತೂರು ತಾಲೂಕು ದಲಿತ್ ಸೇವಾ ಸಮತಿ ಖಂಡನೆ
ಪುತ್ತೂರು: ಜಿ.ಪಂ ಮತ್ತು ತಾ.ಪಂ ಚುನಾವಣೆಯ ವೇಳೆಯಲ್ಲಿ ಪುತ್ತೂರು ತಾಲೂಕಿನ ಅರ್ಯಾಪು ಗರಾಮದ ಕುಂಜೂರು ಪಂಜ ಮತಗಟ್ಟೆಯ ಬಳಿ ಮಾಜಿ ಸೈನಿಕ ಶಿವಪ್ಪ ನಾಯ್ಕ ಅವರ ಮೇಲೆ ತಾ.ಪಂ. ಅಭ್ಯರ್ಥಿಯೇ ಹಲ್ಲೆ ನಡೆಸಿ ಗೂಂಡಾಗಿರಿ ಮೆರೆದಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ದಲಿತ ಸೇವಾ ಸಮಿತಿಯ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಗಿರಿಧರ ನಾಯ್ಕ ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಪ್ರಕರಣದಲ್ಲಿ ಕಾನೂನು ರಕ್ಷಿಸಬೇಕಾಗಿದ್ದ ಪೊಲೀಸರೇ ಕಾನೂನನ್ನು ಕೈಗೆತ್ತಿಕೊಂಡು ಗೂಂಡಾಗಿರಿ ನಡೆಸಿದವರನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಪ್ರಕರಣದಲ್ಲಿ ಪೊಲೀಸರ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಅವರು ಹಲ್ಲೆ ನಡೆಸಿರುವ ತಾ.ಪಂ ಅಭ್ಯರ್ಥಿ ಮಹಾಬಲ ರೈ ಅವರು ತನ್ನ ಸಂಬಂಧಿ ಮಹಿಳೆಯನ್ನು ಮಾನಭಂಗ ನಡೆಸಿದ್ದಾರೆ ಎಂಬ ಸುಳ್ಳು ದೂರು ನೀಡಿದ್ದಾರೆ. ಮಾನಭಂಗ ನಡೆಸಿರುವುದು ನಿಜವಾಗಿದ್ದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅವರು ನಿರೂಪಿಸಿದಲ್ಲಿ ತಾವು ಆ ಮಹಿಳೆಯ ಪರವಾಗಿ ನ್ಯಾಯ ಒದಗಿಸಲು ಬದ್ದರಿದ್ದೇವೆ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾಲೂಕು ದಲಿತ ಸೇವಾ ಸಮಿತಿ ಸದಸ್ಯರಾದ ಧನಂಜಯ ಬಲ್ನಾಡ್, ಸುರೇಶ್ ಕುಂಬ್ರ ಮತ್ತು ಪಡ್ಡಾಯೂರು ಕೇಂದ್ರ ದಲಿತ ಸೇವಾ ಸಮಿತಿ ಅಧ್ಯಕ್ಷ ್ರ ಸುರೇಂದ್ರ ನಾಯ್ಕ ಉಪಸ್ಥಿತರಿದ್ದರು.





