ಟಿವಿ ಆ್ಯಂಕರ್ ಸಿಂಧು ಸೂರ್ಯಕುಮಾರ್‌ಗೆ ಕೊಲೆಬೆದರಿಕೆ ಹಾಕಿಲ್ಲವೆಂಬ ಆರೆಸ್ಸೆಸ್‌ವಾದ ಸರಿಯಲ್ಲ
ಪ್ರಕರಣದಲ್ಲಿ ಬಂಧಿತರಾದವರೆಲ್ಲ ಸಂಘಪರಿವಾರಿಗಳು

ತಿರುವನಂತಪುರಂ,ಮಾರ್ಚ್.4: ಸಿಂಧು ಸೂರ್ಯ ಕುಮಾರ್ ವಿರುದ್ಧ ಕೊಲೆಬೆದರಿಕೆಗೂ ತಮಗೂ ಸಂಬಂಧವಿಲ್ಲ ಎಂಬ ಆರೆಸ್ಸೆಸ್ ವಾದ ಸುಳ್ಳಾಗಿದೆ. ಸಿಂಧು ಸೂರ್ಯಕುಮಾರ್ ವಿರುದ್ಧ ಬೆದರಿಕೆಯಲ್ಲಿ ಸಂಘಪರಿವಾರಕ್ಕೆ ಯಾವ ಪಾಲೂ ಇಲ್ಲ ಎಂದು ಹೇಳಲಾದರೂ ಇವರಿಗೆ ಸ್ಪಷ್ಟ ಸಂಬಂಧವಿದೆ ಎಂಬ ಸಾಕ್ಷ್ಯ ದೊರೆತಿವೆ ಎನ್ನಲಾಗಿದೆ. ಆರೆಸ್ಸೆಸ್, ಸಂಘಪರಿವಾರ ಕಾರ್ಯಕರ್ತರು ಆಶಯ ವಿನಿಮಯಿಸಿಕೊಳ್ಳುವ ವಾಟ್ಸ್‌ಆ್ಯಪ್ ಗ್ರೂಪ್‌ಗಳು ಸಿಂಧು ವಿರುದ್ಧ ಕೊಲೆ ಬೆದರಿಕೆ ಮೊತ್ತಮೊದಲು ಪ್ರಚಾರ ಮಾಡಿದ್ದವು ಎಂದು ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.
ಸಂಘಬಂಧುಗಳು, ಸಂಘಧ್ವನಿ, ಸ್ವಯಮೇವ ಮೃಗೇಂದ್ರತ ಎಂ ಗ್ರೂಪ್‌ಗಳ ಮೂಲಕ ಸಿಂಧು ಸೂರ್ಯ ಕುಮಾರ್‌ರಿಗೆ ಕೊಲೆ ಬೆದರಿಕೆ ವ್ಯಾಪಕವಾಗಿ ಹರಡಲಾಗಿತ್ತು. ಈ ಗ್ರೂಪ್‌ನ ಸದಸ್ಯರು ಸಿಂಧುರನ್ನು ಬೆದರಿಸಿವೆ. ಪೊಲೀಸರು ಬಂಧಿಸಿರುವ ಏಳು ಮಂದಿಯೂ ಈ ಗ್ರೂಪ್‌ಗಳಲ್ಲಿ ಸಕ್ರಿಯವಾಗಿದ್ದವರು.
ಕಳೆದ ದಿವಸ ಸ್ವಯಮೇವ ಮೃಗೇಂದ್ರ ಎಂಬ ಗ್ರೂಪ್‌ನ ಅಡ್ಮಿನ್ ಆದ ಅರುಣ್‌ಶರ್ಮನನ್ನು ಪೊಲೀಸರು ಬಂಧಿಸಿದ್ದರು. ಸಿಂಧುರಿಗೆ ಕೊಲೆ ಬೆದರಿಕೆ ಸಂದೇಶವು ಸಂಘಬಂಧುಗಳು ಎಂಬ ಗ್ರೂಪ್ ನಿಂದ. ಇದರ ಅಡ್ಮಿನ್ ಆರೆಸ್ಸೆಸ್ ಕಾರ್ಯಕರ್ತ ಅನೂಪ್ ಚಂದ್ರನನ್ನು ಪೊಲೀಸರು ಹುಡುಕುತ್ತಿದ್ದಾರೆ. ತಿರುವನಂತಪುರದಲ್ಲಿ ಬಂಧಿಸಲಾದ ರಾರಿಶ್ ಮತ್ತು ಕಣ್ಣೂರಿನಲ್ಲಿ ಬಂಧಿಸಲಾದ ಮೂವರೂ ಆರೆಸ್ಸೆಸ್‌ನಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಆರೆಸ್ಸೆಸ್,ಬಿಜೆಪಿ ಕಾರ್ಯಕರ್ತರು ಕಣ್ಣೂರಿನಲ್ಲಿ ಬಂಧಿಸಲಾದ ಆರೋಪಿಗಳ ಫೋಟೊ ತೆಗೆಯದಂತೆ ತಡೆದಿದ್ದರು. ಕಂಟೊನ್ಮೆಂಟ್ ಠಾಣೆಯಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದು ಮತ್ತು ಸ್ವಾಗತಿಸಿದ್ದೆಲ್ಲವೂ ಈ ಘಟನೆಯಲ್ಲಿ ಸಂಘಪರಿವಾರದ ಪಾತ್ರವನ್ನು ಸ್ಪಷ್ಟ ಪಡಿಸುತ್ತಿದೆ ಎಂದು ವರದಿಯಾಗಿದೆ.
ಈ ನಡುವೆ ತನಿಖಾ ಅಧಿಕಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟದ ಕುರಿತು ಸಿಂಧುಸೂರ್ಯಕುಮಾರ್ ಪ್ರಸ್ತುತ ಪಡಿಸಿದ ನ್ಯೂಸ್ ಸಿಡಿಯನ್ನೂ ಪರಿಶೀಲಿಸಿದ್ದು ಸಿಂಧೂ ವಿರುದ್ಧ ಪ್ರಚಾರವೆಲ್ಲ ಆಧಾರ ರಹಿತವೆಂದು ಗುರುತಿಸಿದ್ದಾರೆಂದೂ ವರದಿಯಾಗಿದೆ.







