ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಬಂಧನಕ್ಕೆ ಸಿಪಿಎಂ ಆಗ್ರಹ
ಮಂಗಳೂರು ಮಾ, 3; ‘ಭಯೋತ್ಪಾದನೆ ನಾಶವಾಗಬೇಕಾದರೆ ಇಸ್ಲಾಂ ನಾಶವಾಗಬೇಕು’ ಹಾಗೂ ‘ಭಯೋತ್ಪಾದನೆಗೆ ಇಸ್ಲಾಂ ಧರ್ಮ ಕಾರಣ’ ಎಂಬ ಹೇಳಿಕೆ ನೀಡಿದ ಬೇಜವಾಬ್ದಾರಿ ಸಂಸದ ಅನಂತಕುಮಾರ್ ಹೆಗಡೆಯವರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಸಿಪಿಎಂ ಜಿಲ್ಲಾ ಸಮಿತಿ ಆಗ್ರಹಿಸಿದೆ.ಧರ್ಮದ, ಮತದ ಆಧಾರದಲ್ಲಿ ಸಮಾಜವನ್ನು ಒಡೆದು ರಾಜಕೀಯ ಮಾಡುವ ಇಂತಹ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಬೇಕಾದದ್ದು ಸರಕಾರದ ಕರ್ತವ್ಯ. ಕೋಮುಗಲಭೆಗಳನ್ನು ಸೃಷ್ಟಿಸಿ ಸಮಾಜದ ಅಶಾಂತಿಗೆ ಕಾರಣವಾಗುವ ಈ ಹೇಳಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಿತಿಯ ಕಾರ್ಯದರ್ಶಿ ವಸಂತ ಆಚಾರಿ ಎಂದು ಒತ್ತಾಯಿಸಿದ್ದಾರೆ.
Next Story





