ಏಷ್ಯಾಕಪ್: ಪಾಕಿಸ್ತಾನಕ್ಕೆ 6 ವಿಕೆಟ್‌ಗಳ ಜಯ
ದಿಲ್ಶನ್-ಚಾಂಡಿಮಲ್ ಭರ್ಜರಿ ಜೊತೆಯಾಟ ವ್ಯರ್ಥ

ಮೀರ್ಪುರ, ಮಾ.4: ಪಾಕಿಸ್ತಾನ ತಂಡ ಏಷ್ಯಾಕಪ್‌ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಏಷ್ಯಾಕಪ್‌ನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ತಿಲಕರತ್ನೆ ದಿಲ್ಶನ್(ಔಟಾಗದೆ 75 ರನ್) ಹಾಗೂ ದಿನೇಶ್ ಚಾಂಡಿಮಲ್(58) ಮೊದಲ ವಿಕೆಟ್‌ಗೆ ಸೇರಿಸಿದ 110 ರನ್ ಜೊತೆಯಾಟದ ನೆರವಿನಿಂದ 150 ರನ್ ಗಳಿಸಿತ್ತು.
14ನೆ ಓವರ್‌ಗೆ 110 ರನ್ ಗಳಿಸಿದ್ದ ಶ್ರೀಲಂಕಾ ಉಳಿದ ಆರು ಓವರ್‌ಗಳಲ್ಲಿ ಕೇವಲ 40 ರನ್ ಗಳಿಸಿತ್ತು.
ಗೆಲ್ಲಲು ಸವಾಲಿನ ಮೊತ್ತ ಪಡೆದ ಪಾಕಿಸ್ತಾನ ತಂಡ ಉಮರ್ ಅಕ್ಮಲ್(48 ರನ್, 37ಎಸೆತ, 4 ಬೌಂಡರಿ, 2 ಸಿಕ್ಸರ್), ಶುಐಬ್ ಮಲಿಕ್(ಔಟಾಗದೆ 13ರನ್) 4ನೆ ವಿಕೆಟ್‌ಗೆ ಸೇರಿಸಿದ 56 ರನ್ ಜೊತೆಯಾಟದ ನೆರವಿನಿಂದ 19.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿ ಗೆಲುವಿನ ದಡ ಸೇರಿತು.
ಪಾಕ್ ಪರ ಅಗ್ರ ಕ್ರಮಾಂಕದಲ್ಲಿ ಶಾರ್ಜೀಲ್ ಖಾನ್ (31), ಸರ್ಫರಾಝ್ ಅಹ್ಮದ್(38) ಎರಡಂಕೆ ಸ್ಕೋರ್ ದಾಖಲಿಸಿದ್ದರು. ಮುಹಮ್ಮದ್ ಹಫೀಝ್(14) ಮತ್ತೊಮ್ಮೆ ವಿಫಲರಾದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 20 ಓವರ್‌ಗಳಲ್ಲಿ 150/4
(ತಿಲಕರತ್ನೆ ದಿಲ್ಶನ್ ಔಟಾಗದೆ 75, ದಿನೇಶ್ ಚಾಂಡಿಮಲ್ 58, ಮುಹಮ್ಮದ್ ಇರ್ಫಾನ್(2-18)
ಪಾಕಿಸ್ತಾನ: 19.2 ಓವರ್‌ಗಳಲ್ಲಿ 151/4
(ಉಮರ್ ಅಕ್ಮಲ್ 48, ಸರ್ಫರಾಝ್ ಅಹ್ಮದ್ 38, ಶಾರ್ಜೀಲ್ ಖಾನ್ 31, ಶುಐಬ್ ಮಲಿಕ್ ಔಟಾಗದೆ 13, ಕುಲಸೇಕರ 1-20, ಜಯಸೂರ್ಯ 1-13, ದಿಲ್ಶನ್ 1-2, ಸಿರಿವರ್ಧನ 1-20)
ಪಂದ್ಯಶ್ರೇಷ್ಠ: ಉಮರ್ ಅಕ್ಮಲ್.







