ಮುಲ್ಕಿ : ಲಾರಿ ಡಿಕ್ಕಿ - ಪಾದಚಾರಿ ಗಂಭೀರ

ಮುಲ್ಕಿ, ಮಾ.4: ವ್ಯಕ್ತಿ ಯೋರ್ವ ರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರಗಾಯ ಗೊಂಡಿರುವ ಘಟನೆ ಮುಲ್ಕಿ ಬಪ್ಪನಾಡು ದೇವಸ್ಥಾನದ ಬಳಿ ನಡೆದಿದೆ
ಗಂಭೀರ ಗಾಯಗೊಂಡವರನ್ನು ಮುಲ್ಕಿ ಕೊಳಚೆಕಂಬ್ಳ ನಿವಾಸಿ ಗಣೇಶ್ ಎಂದು ತಿಳಿದು ಬಂದಿದೆ.
ಗಣೇಶ್ ಕೆಲಸ ಮುಗಿಸಿಕೊಂಡು ರಾ.ಹೆ.66 ರನ್ನು ದಾಟಿ ಮನೆಗೆಗೆ ತೆರಳುತ್ತಿದ್ದಾಗ ಮಂಗಳೂರು ಕಡೆಯಿಂದ ಅತಿವೇಗದಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಡಿಕ್ಕಿ ಹೊಡೆದು ಸುಮಾರು 50 ಮೀಟರ್ ಗಳಷ್ಟು ಎಳೆದು ಕೊಂಡು ಹೋಗಿದ್ದು, ಮುಖ ಎದೆ,ಕೈಕಾಲುಗಳಿಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮಂಗಳೂರು ಉತ್ತರವಲಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣದಾಖಲಿಸಿ ಕೊಂಡಿದ್ದಾರೆ.
Next Story





