ಅಣು ಸ್ಥಾವರವನ್ನೇ ನಿಲ್ಲಿಸಿದ ಹಕ್ಕಿಯ ಹಿಕ್ಕೆ!

ನ್ಯೂಯಾರ್ಕ್, ಮಾ. 4: ಸರಿಯಾದ ಸಮಯದಲ್ಲಿ ನಮ್ಮ ಬಟ್ಟೆಯ ಮೇಲೆ ಬೀಳುವ ಹಕ್ಕಿಯ ಒಂದು ಹಿಕ್ಕೆ ನಮ್ಮ ಸಂಭ್ರಮವನ್ನೇ ನಾಶಪಡಿಸಬಲ್ಲದು! ಅಷ್ಟೇ ಅಲ್ಲ ಅದರ ಸಾಮರ್ಥ್ಯ. ಒಂದು ಕ್ಷಣಕ್ಕೆ ಅಣು ಸ್ಥಾವರವನ್ನೇ ನಿಲ್ಲಿಸಿಬಿಡಬಲ್ಲದು!
ಆಕಾಶದಿಂದ ಬಿದ್ದ ಹಕ್ಕಿಯ ಹಿಕ್ಕೆ ನ್ಯೂಯಾರ್ಕ್ ನಗರದ ಹೊರವಲಯದಲ್ಲಿರುವ ಅಣು ವಿದ್ಯುತ್ ಸ್ಥಾವರದ ಸೇಫ್ಟ್ ಬ್ರೇಕರನ್ನು ಟ್ರಿಪ್ ಮಾಡಿತು. ಹಾಗೂ ಕಳೆದ ವರ್ಷದ ಡಿಸೆಂಬರ್ 14ರಿಂದ ಮೂರು ದಿನಗಳ ಕಾಲ ಸ್ಥಾವರದ ಕಾರ್ಯವನ್ನು ನಿಲ್ಲಿಸಿತು.
ಈ ಘಟನೆಯ ಕುರಿತ ತನಿಖೆ ಅಂತಿಮವಾಗಿ ಹಕ್ಕಿಯ ಹಿಕ್ಕೆಯತ್ತ ಬೆಟ್ಟು ಮಾಡಿದೆ.
Next Story





