Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೀರು ಕೇಳಿದ ರೈತರಿಗೆ ಲಾಠಿ ಬೀಸುವುದು...

ನೀರು ಕೇಳಿದ ರೈತರಿಗೆ ಲಾಠಿ ಬೀಸುವುದು ಸಮಾಜವಾದವೇ?

ವಾರ್ತಾಭಾರತಿವಾರ್ತಾಭಾರತಿ4 March 2016 11:33 PM IST
share

ಸಿದ್ದರಾಮಯ್ಯ ಅವರು ಹೋರಾಟಗಳ ಮೂಲಕ ರೂಪುಗೊಂಡ ರಾಜಕಾರಣಿ. ಲೋಹಿಯಾವಾದ, ಸಮಾಜವಾದ ಇತ್ಯಾದಿಗಳನ್ನು ಅವರಷ್ಟು ಚೆನ್ನಾಗಿ ಉಳಿದ ನಾಯಕರು ಅರ್ಥ ಮಾಡಿಕೊಳ್ಳಲಾರರು. ರೈತರ, ಜನಸಾಮಾನ್ಯರ ತಳಸ್ತರದ ಸಮಸ್ಯೆಗಳನ್ನು ಮಾತನಾಡುತ್ತಲೇ ಸಿದ್ದರಾಮಯ್ಯ ರಾಜಕೀಯವಾಗಿ ಮೇಲೆ ಬಂದರು. ಈ ಹೋರಾಟದ ಸಂದರ್ಭದಲ್ಲಿ ಆಳುವವರಿಂದ ಸಾಕಷ್ಟು ಅಡೆತಡೆಗಳನ್ನು ಎದುರಿಸಿದವರು. ಆದುದರಿಂದಲೇ, ರೈತರ, ಜನಸಾಮಾನ್ಯರ ಪ್ರತಿಭಟನೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಸಿದ್ದರಾಮಯ್ಯರಂತಹ ನಾಯಕರಿಗೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ರೈತರ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವ, ದಲಿತ ನಾಯಕನೊಬ್ಬ ಗೃಹ ಸಚಿವರಾಗಿರುವ ರಾಜ್ಯದಲ್ಲಿ ರೈತರ, ದಲಿತರ ಪ್ರತಿಭಟನೆಗಳನ್ನು ಲಾಠಿಗಳ ಮೂಲಕ ಬಗ್ಗು ಬಡಿಯಲಾಗುತ್ತದೆ ಎನ್ನುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಕೋಲಾರ, ಚಿಕ್ಕ ಬಳ್ಳಾಪುರ ಸೇರಿದಂತೆ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ, ಆ ಭಾಗದ ರೈತರು ಹಮ್ಮಿಕೊಂಡಿದ್ದ ‘ವಿಧಾನಸೌಧ ಮುತ್ತಿಗೆ’ಯನ್ನು ನಿರ್ವಹಿಸಿದ ರೀತಿ ಕಾಂಗ್ರೆಸ್ ಪಕ್ಷಕ್ಕೆ ಹೇಳಿ ಮಾಡಿಸಿದ್ದೇ ಹೊರತು, ಸಿದ್ದರಾಮಯ್ಯ ಅವರಂತಹ ಸಮಾಜವಾದಿ ನಾಯಕರಿಗೆ ಹೇಳಿ ಮಾಡಿಸಿರುವುದಲ್ಲ. ರೈತರ ಮೇಲೆ ನಡೆದ ಲಾಠಿ ಜಾರ್ಜ್‌ಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಸಮಾನ ಹೊಣೆಗಾರರು.

ವಿರೋಧ ಪಕ್ಷ ಇದರ ವಿರುದ್ಧ ಧ್ವನಿಯೆತ್ತಿದಾಕ್ಷಣ ಸಿದ್ದರಾಮಯ್ಯ ಅವರು ಸಿಟ್ಟಿಗೇಳುತ್ತಾರೆ ‘‘ರೈತರಿಗೆ ಗುಂಡಿಕ್ಕಿದವರಿಂದ ನಾನು ಪಾಠ ಕಲಿಯಬೇಕಾಗಿಲ್ಲ’’ ಎಂದು ಅವರ ಬಾಯಿ ಮುಚ್ಚಿಸುತ್ತಾರೆ. ಆದರೆ ರೈತರಿಗೆ ಗುಂಡಿಕ್ಕಿದ ಕಾರಣಕ್ಕಾಗಿಯೇ ಇಂದು ಯಡಿಯೂರಪ್ಪ ಮತ್ತು ಅವರ ಬಳಗಕ್ಕೆ ಈ ರಾಜ್ಯದಲ್ಲಿ ಇಂತಹ ದೈನೇಸಿ ಸ್ಥಿತಿ ಬಂದಿದೆ ಎನ್ನುವುದು ನಿರ್ಲಕ್ಷಿಸುವಂತಹ ಪಾಠವೇನೂ ಅಲ್ಲ. ಖಂಡಿತವಾಗಿ ರೈತರಿಗೆ ಗುಂಡಿಕ್ಕಿದ ಯಡಿಯೂರಪ್ಪ ಪಕ್ಷ, ಸಿದ್ದರಾಮಯ್ಯ ಅವರಿಗೆ ಪಾಠವಾಗಬೇಕು. ನೀವು ಗುಂಡಿಕ್ಕಿದಿರಿ, ನಾನು ಲಾಠಿ ಮಾತ್ರ ಬೀಸಿದೆ ಎನ್ನುವ ಸಮರ್ಥನೆ ಸಿದ್ದರಾಮಯ್ಯ ಚಿಂತನೆಗಳಿಗೆ ಒಪ್ಪುವಂತಹದಲ್ಲ. ಗುರುವಾರ ಸಿದ್ದರಾಮಯ್ಯ ಅವರ ಪೊಲೀಸರು ಬೀಸಿದ ಲಾಠಿ ಆಕಸ್ಮಿಕವೇನೂ ಅಲ್ಲ. ಕೆಲವು ದಿನಗಳ ಹಿಂದೆ ಉದ್ಯಮಪತಿಗಳ ಸಮಾವೇಶದಲ್ಲಿ ದಲಿತರು, ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದಾಗಲೂ ಪೊಲೀಸರ ಮೂಲಕವೇ ಆ ಪ್ರತಿಭಟನೆಯನ್ನು ಬಗ್ಗುಬಡಿಯಲಾಗಿತ್ತು. ಅಷ್ಟೇ ಅಲ್ಲ, ಹಲವು ದಲಿತ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಇದು ಬಿಜೆಪಿ ಸರಕಾರದಲ್ಲಿ ನಡೆದಿದ್ದರೆ, ಅವರ ಸಿದ್ಧಾಂತಕ್ಕೆ ಪೂರಕವಾಗಿಯೇ ನಡೆದಿದೆ ಎಂದು ಸುಮ್ಮನಿರಬಹುದಿತ್ತೇನೋ. ಆದರೆ ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ನಂಬಿಕೆಯಿಟ್ಟು ಅವರನ್ನು ಅಧಿಕಾರಕ್ಕೇರಿಸಿದ ಮಂದಿಯ ಮೇಲೆಯೇ ಲಾಠಿ ಬೀಸುವುದು, ತನ್ನ ಜನರಿಗೆ ಸಿದ್ದರಾಮಯ್ಯ ಸರಕಾರ ಬಗೆಯುವ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ದಲಿತರು ಮತ್ತು ರೈತರ ಮೇಲೆ ಪೊಲೀಸರು ವರ್ತಿಸಿದ ರೀತಿಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಪಷ್ಟೀಕರಣ ನೀಡಲೇಬೇಕಾಗಿದೆ.
 
 ಇದೇ ಸಂದರ್ಭದಲ್ಲಿ ರೈತರು ಯಾವುದೇ ಭಾವನಾತ್ಮಕ ಅಥವಾ ಕೋಮುಪ್ರಚೋದಕ ವಿಷಯಗಳಿಗೆ, ಮಂದಿರ, ಮಸೀದಿಗಳಿಗಾಗಿ ಬೀದಿಗಿಳಿದಿರಲಿಲ್ಲ. ಅತ್ಯಗತ್ಯವಾದ ನೀರಿಗಾಗಿ ಅವರು ಬೀದಿಗಿಳಿದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ನೀರಿನ ಕೂಗು ಇಂದು ನಿನ್ನೆಯದಲ್ಲ. ರೈತರಿಗೆ ನೀರು ಕೊಟ್ಟರೆ, ಅದು ಬೃಹತ್ ಕಾರ್ಖಾನೆಗಳಿಗೆ ನೀರು ಕೊಟ್ಟಂತಲ್ಲ. ರೈತರು ಅದರ ದುಪ್ಪಟ್ಟು ಫಲವನ್ನು ಮರಳಿ ಈ ನೆಲಕ್ಕೆ ನೀಡುತ್ತಾರೆ. ರೈತರು ಬಾಯಾರಿದರೆ, ಅದರ ಪರಿಣಾಮವನ್ನು ಇಡೀ ರಾಜ್ಯವೇ ಅನುಭವಿಸಬೇಕಾಗುತ್ತದೆ. ಆದುದರಿಂದ, ರೈತರ ಬೇಡಿಕೆಗಳನ್ನು ಈಡೇರಿಸುವುದೆಂದರೆ, ಸ್ವತಃ ಸರಕಾರ ತನಗೆ ತಾನೇ ಒಳಿತನ್ನು ಮಾಡಿಕೊಂಡಂತೆ. ಇಷ್ಟಕ್ಕೂ ಕರ್ನಾಟಕ, ಬೃಹತ್ ಯೋಜನೆಗಳ ಚಿತ್ರಗಳನ್ನು ರೈತರ ಮುಂದಿಡುತ್ತಾ ಅವರನ್ನು ಸಮಾಧಾನಿಸುತ್ತದೆಯೇ ಅದನ್ನು ವಾಸ್ತವಕ್ಕೆ ಇಳಿಸುವಲ್ಲಿ ಸಂಪೂರ್ಣ ವಿಫಲವಾಗುತ್ತಾ ಬಂದಿದೆ. ಇದಕ್ಕೆ ಕೇವಲ ಕಾಂಗ್ರೆಸ್ ಸರಕಾರ ಮಾತ್ರವಲ್ಲ, ಈ ಹಿಂದಿನ ಸರಕಾರ ಕೂಡ ರೈತರಿಗೆ ನೀರು ಒದಗಿಸುವ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಅದರ ಮುಂದುವರಿದ ಭಾಗವೇ ಈಗ ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ನಡೆಯುತ್ತಿರುವ ಪ್ರಹಸನ. ಉತ್ತರ ಕರ್ನಾಟಕ ಮತ್ತು ಇತರ ಬಯಲುಸೀಮೆಗಳ ರೈತರ ಮತ್ತು ಜನರ ನೀರಿನ ಅಗತ್ಯಗಳನ್ನು ಪೂರೈಸಲು ಎರಡು ಮಹತ್ವದ ಯೋಜನೆಗಳನ್ನು ಸರಕಾರ ಮುಂದಿಟ್ಟಿದೆ. ಅದರಲ್ಲಿ ಮುಖ್ಯವಾದದ್ದು, ಒಂದು, ಕಳಸ ಬಂಡೂರಿ ಯೋಜನೆ. ಮಗದೊಂದು ಎತ್ತಿನ ಹೊಳೆ ಯೋಜನೆ. ಆದರೆ ಈ ಎರಡೂ ಯೋಜನೆಗಳು ಹತ್ತು ಹಲವು ವಿಘ್ನಗಳ ನಡುವೆ ನಿಂತಿದೆ. ಮಹದಾಯಿ ಯೋಜನೆಗೆ ಕೇಂದ್ರ ಸರಕಾರವೇ ಬಹುದೊಡ್ಡ ತೊಡಕಾಗಿ ಬಿಟ್ಟಿದೆ. ಕೇಂದ್ರ ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿದೆ. ಕೇಂದ್ರ ಸರಕಾರ ಬಿಜೆಪಿಯ ಕೈಯಲ್ಲಿರುವುದರಿಂದ ಈ ಯೋಜನೆ ಸರಾಗವಾಗಲು ರಾಜ್ಯದ ಸಂಸದರು ಕೇಂದ್ರಕ್ಕೆ ಒತ್ತಡ ಹೇರಬೇಕು. ಇದೇ ಸಂದರ್ಭದಲ್ಲಿ ಎತ್ತಿನ ಹೊಳೆ ಯೋಜನೆ ಹತ್ತು ಹಲವು ಅನುಮಾನಗಳನ್ನು ರೈತರಲ್ಲಿ ಹುಟ್ಟಿಸಿ ಹಾಕಿದೆ. ಈ ಯೋಜನೆ, ಕೇವಲ ಹಣ ಲೂಟಿ ಮಾಡುವುದರಲ್ಲಿ ಮುಕ್ತಾಯವಾಗುತ್ತದೆಯೇ ಹೊರತು, ಇದರಿಂದ ರೈತರಿಗೆ ನೀರು ಸಿಗುವುದಿಲ್ಲ ಎನ್ನುವ ಆರೋಪಗಳಿವೆ.

ಇದೇ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆ ಯಶಸ್ವಿಯಾದರೆ, ಕರಾವಳಿಯ ಜನರು ನೀರಿಗಾಗಿ ತಹತಹಿಸಬೇಕಾಗುತ್ತದೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಅಸ್ತವ್ಯಸ್ತವಾಗುತ್ತದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಸರಕಾರ ಈ ಯೋಜನೆಯ ಕುರಿತಂತೆ ಕರಾವಳಿ ಜನರಿಗಾಗಲಿ, ಬಯಲು ಸೀಮೆಯ ಜನರಿಗಾಗಲಿ ಸ್ಪಷ್ಟವಾದ ಭರವಸೆಯನ್ನು ಈ ವರೆಗೆ ನೀಡಿಲ್ಲ. ಇದರಿಂದಾಗಿ ರೈತರು ಹತಾಶೆಯಿಂದ ಬೀದಿಗಿಳಿದಿದ್ದಾರೆ. ಅವರಲ್ಲಿ ಆಶಾವಾದವನ್ನು, ಭರವಸೆಯನ್ನು ಬಿತ್ತಿ, ಯೋಜನೆಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವುದು ಸರಕಾರದ ಕರ್ತವ್ಯ. ಇದೇ ಸಂದರ್ಭದಲ್ಲಿ ರೈತರು, ದಲಿತರ ಮೇಲೆ ಯದ್ವಾತದ್ವಾ ಲಾಠಿ ಬೀಸುತ್ತಿರುವ ಪೊಲೀಸರಿಗೆ ನಿಯಂತ್ರಣ ಹೇರುವುದು ಗೃಹಸಚಿವರ ಕರ್ತವ್ಯವಾಗಿದೆ. ಇಲ್ಲವಾದರೆ, ಈ ಲಾಠಿಗಳೇ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಕುತ್ತಾಗಿ ಬಿಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X