ಚುಟುಕು ಸುದ್ದಿಗಳು
ಇಂದಿನ ಕಾರ್ಯಕ್ರಮ
ಪ್ರಶಸ್ತಿ ಪ್ರದಾನ: ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ ಮಂಗಳೂರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಹಾಗೂ ಎಂಜಿಎಂ ಕಾಲೇಜು ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಗಮಕಿ ಜಯರಾಮ ರಾವ್‌ರಿಗೆ ಮುಳಿಯ ತಿಮ್ಮಪ್ಪಯ್ಯ ಸ್ಮರಣಾರ್ಥ ಪ್ರಶಸ್ತಿ ಪ್ರದಾನ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ. ಮಹಿಳಾ ವಿಚಾರಗೋಷ್ಠಿ: ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಲೇಖಕಿಯರ ಸಂಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಹಾಸ್ಯ ಬರಹಗಾರ ಪಡುಕೋಣೆ ರಮಾನಂದ ರಾಯರ ಬಗ್ಗೆ ವಿಶೇಷ ಉಪನ್ಯಾಸ, ಮಹಿಳಾ ವಿಚಾರಗೋಷ್ಠಿ ಹಾಗೂ ಜನಪದ ಗೀತಗಾಯನ. ಸಮಯ: ಅಪರಾಹ್ನ 3:30ಕ್ಕೆ. ಸ್ಥಳ: ಹೊಟೇಲ್ ಕಿದಿಯೂರಿನ ಮಹಾಜನ ಸಭಾಂಗಣ, ಉಡುಪಿ.ವರ್ಣೋದಯ ಚಿತ್ರಕಲಾ ಶಿಬಿರ: ಕಿದಿಯೂರು ಉದಯಕುಮಾರ್ ಶೆಟ್ಟಿ ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ಕಿದಿಯೂರು ಸ್ಕೂಲ್ ಆ್ ಆರ್ಟ್ಸ್ ಉಡುಪಿ ಇದರ ನೇತೃತ್ವದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ‘ವರ್ಣೋದಯ’. ಸಮಯ: ಬೆಳಗ್ಗೆ 10 ರಿಂದ. ಸ್ಥಳ: ಲಯನ್ಸ್ ಭವನ, ಬ್ರಹ್ಮಗಿರಿ ಉಡುಪಿ. ವಿಶೇಷ ಸಾಮಾನ್ಯ ಸಭೆ: 2016-17ನೆ ಸಾಲಿನ ಬಜೆಟ್ ಮಂಡನೆಗಾಗಿ ಉಡುಪಿ ನಗರಸಭೆಯ ವಿಶೇಷ ಸಾಮಾನ್ಯ ಸಭೆ. ಸಮಯ: ಬೆಳಗ್ಗೆ 11 ಕ್ಕೆ. ಸ್ಥಳ: ನಗರಸಭೆಯ ಸತ್ಯಮೂರ್ತಿ ಸಭಾಂಗಣ, ಉಡುಪಿ. ಗಾಯನ ಸಂಭ್ರಮ: ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ತ್ರಿವಳಿ ಗಾಯನ ಕಲಾವಿದರ 300ನೆ ಗಾಯನ ಸಂಭ್ರಮ. ಬೆಳಗ್ಗೆ 9 ರಿಂದ ಭಜನಾ ಕಮ್ಮಟ, ಅಪರಾಹ್ನ 1:50ರಿಂದ ಗಾನಾಭಿಷೇಕ, 2:30ರಿಂದ ದಾಸಲಹರಿ, 3 ರಿಂದ ಗಾನಸುಧೆ, 3:30ರಿಂದ ಭಕ್ತಿ ಸಂಗೀತ, 4:30ಕ್ಕೆ ಸಮಾರಂಭ ಉದ್ಘಾಟನೆ, ಸಂಜೆ 6ಕ್ಕೆ ಪೇಜಾವರ ಶ್ರೀಯಿಂದ ಪ್ರವಚನ, ಸಂಜೆ 7ರಿಂದ ಬೆಂಗಳೂರಿನ ಶ್ರೀವಿದ್ಯಾಭೂಷಣರಿಂದ ಭಕ್ತಿಗಾನಾಮೃತಂ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.ವಿಶೇಷ ಉಪನ್ಯಾಸ: ಮಣಿಪಾಲದ ಗಾಂ ಮತ್ತು ಶಾಂತಿ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ವಿವಿಯ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ‘ಯೂರೋಪಿನ ನಿರಾಶ್ರಿತರ ಸಮಸ್ಯೆಗಳು’ ಎಂಬ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಸ್ಕಾಟ್ಲಂಡ್‌ನ ಎಡಿನ್‌ಬರ್ಗ್ ನೇಪಿಯರ್ ವಿವಿಯ ಪ್ರೊ. ನೀಲ್ ್ರೇಸರ್‌ರಿಂದ. ಸಮಯ: ಸಂಜೆ 4:30ಕ್ಕೆ. ಸ್ಥಳ: ಹಳೆ ಟ್ಯಾಪ್ಮಿ ಕಟ್ಟಡದ ಮೊದಲ ಮಹಡಿಯ ಎಲ್‌ಎಚ್1 ಸಭಾಂಗಣ, ಮಣಿಪಾಲ. ವಿಚಾರಸಂಕಿರಣ: ಮಣಿಪಾಲ ಸ್ಕೂಲ್ ಆ್ ಕಮ್ಯೂ ನಿಕೇಶನ್ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸ. ಸಮಯ: ಬೆಳಗ್ಗೆ 9 ಹಾಗೂ ಸಂಜೆ 4ರಿಂದ. ಸ್ಥಳ: ಹೊಟೇಲ್ ಾರ್ಚ್ಯೂನ್ಸ್ ಇನ್ ವ್ಯಾಲಿವ್ಯೆನ ಚೈತ್ಯ ಸಭಾಂಗಣ, ಮಣಿಪಾಲ. ವರ್ಣ ನಿರಂತರ: ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ಉಡುಪಿ ಇದರ ವಿದ್ಯಾರ್ಥಿಗಳಿಂದ ವಾರ್ಷಿಕ ಚಿತ್ರಕಲಾ ಪ್ರದರ್ಶನ ‘ವರ್ಣ ನಿರಂತರ- 2016’. ಸಮಯ: ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ. ಸ್ಥಳ: ಚಿತ್ರಕಲಾ ಮಂದಿರ, ಸಿಟಿ ಬಸ್ ನಿಲ್ದಾಣದ ಬಳಿ, ಉಡುಪಿ.ರಜತ ಸಂಭ್ರಮ ಉದ್ಘಾಟನೆ: ಅಲೆವೂರಿನ ನೆಹರೂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್‌ನ ರಜತ ಸಂಭ್ರಮ ಉದ್ಘಾಟನೆ ಹಾಗೂ 25ನೆ ವರ್ಷದ ಹೊನಲು ಬೆಳಕಿನ ‘ಶ್ಯಾಮಸುಂದರಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ. ಸಮಯ: ಸಂಜೆ 7ಕ್ಕೆ ಸ್ಥಳ: ನೆಹರೂ ಕ್ರೀಡಾಂಗಣ, ಅಲೆವೂರು ಉಡುಪಿ.
ವಾರ್ಷಿಕೋತ್ಸವ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ. ಸಮಯ: ಬೆಳಗ್ಗೆ 11ಕ್ಕೆ. ಸ್ಥಳ: ಕಾಲೇಜಿನ ಭಾವಪ್ರಕಾಶ ಸಭಾಂಗಣ, ಕುತ್ಪಾಡಿ ಉಡುಪಿ. ರಾಷ್ಟ್ರೀಯ ರಂಗೋತ್ಸವ: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ 6ನೆ ವರ್ಷದ ರಾಷ್ಟ್ರೀಯ ರಂಗೋತ್ಸವ- 2016ದಲ್ಲಿ ಇಂದು 7 ಕ್ಕೆ ಸಭಾ ಕಾರ್ಯಕ್ರಮ, 7:30ರಿಂದ ಅಸ್ಸಾಂ ದರ್ರಂಗ್‌ನ ಚರ್ಸಾ ನಾಟ್ಯಭೂಮಿ ತಂಡದಿಂದ ಅಸಿಮ್ ಕುಮಾರ್ ನಾಥ್ ನಿರ್ದೇಶನದಲ್ಲಿ ಅಸ್ಸಾಮಿ ನಾಟಕ ‘ಬೈರಲ್ ತಪಸ್ವೀ’. ಸ್ಥಳ: ನಾಟ್ಕದೂರು, ಮುದ್ರಾಡಿ.
ಅಂತಾರಾಷ್ಟ್ರೀಯ ವಿಚಾರಸಂಕಿರಣ: ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಯುಜಿಸಿ ಸಹಯೋಗದಲ್ಲಿ ‘ಸಮಾಜ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಶಿಕ್ಷಣ’ ಅಂತಾರಾಷ್ಟ್ರೀಯ ವಿಚಾರಸಂಕಿರಣ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ- ರೋಶನಿ ನಿಲಯ, ವೆಲೆನ್ಸಿಯ, ಮಂಗಳೂರು. ಮೀನುಗಾರಿಕಾ ಸಮಾವೇಶ: ರಾಷ್ಟ್ರೀಯ ಮಟ್ಟದ ಮತ್ಸಮೇಳದ ಪ್ರಯುಕ್ತ ಮೀನುಗಾರಿಕಾ ಸಮಾವೇಶ. ಸಮಯ: ಬೆಳಗ್ಗೆ 10ರಿಂದ. ಸ್ಥಳ- ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಹಾಲ್, ಮಂಗಳೂರು. ಎನ್‌ಪಿಎಸ್ ನೌಕರರ ಸಂಘದ ಸಭೆ: ಹೊಸ ಪಿಂಚಣಿ ಯೋಜನೆಯ ಲೋಪದೋಷದ ಬಗ್ಗೆ ಎನ್‌ಪಿಎಸ್ ನೌಕರರ ಸಂಘದ ಸಭೆ. ಸಮಯ ಮಧ್ಯಾಹ್ನ 2:15ಕ್ಕೆ, ಸ್ಥಳ: ಬಲ್ಮಠ ಪದವಿಪೂರ್ವ ಕಾಲೇಜು. ಬಾಳಿಲ ಕೃಷ್ಣಶಾಸಿ ನುಡಿನಮನ: ಮಂಗಳೂರು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಬಾಳಿಲ ಕೃಷ್ಣಶಾಸಿ ನುಡಿನಮನ. ಸಮಯ: ಸಂಜೆ 3:30ಕ್ಕೆ. ಸ್ಥಳ: ಸರಕಾರಿ ಬಿ.ಎಡ್. ಕಾಲೇಜು, ಮಂಗಳೂರು.
ನಾಳೆ ಮಜ್ಲಿಸುನ್ನೂರ್ ಸಂಗಮ
ಮಂಗಳೂರು, ಮಾ.4: ಅಡ್ಯಾರ್ ಕಣ್ಣೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರ್ ಆತ್ಮೀಯ ಸಂಗಮವು ಮಾ.6ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಖತೀಬ್ ಎಸ್.ಬಿ.ಮುಹಮ್ಮದ್ ಶರ್ೀ ಅರ್ಶದಿ ಹಾಗೂ ಮುದರ್ರಿಸ್ ಸೈಯದ್ ತ್ವಾಹಾ ಜಿಫ್ರಿ ತಂಳ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ನಾಳೆ ಚೇರುಶ್ಶೇರಿ ಉಸ್ತಾದ್ ಅನುಸ್ಮರಣೆ
ಮಂಗಳೂರು, ಮಾ.4: ಅಡ್ಯಾರ್ ಕಣ್ಣೂರಿನ ಟಿಟಿಎಸ್‌ಎಸ್ ದರ್ಸ್ ವಿದ್ಯಾರ್ಥಿ ಸಂಘಟನೆ ವತಿಯಿಂದ ಝೈನುಲ್ ಉಲಮಾ ಶೈಖುನಾ ಚೇರುಶ್ಶೇರಿ ಉಸ್ತಾದ್‌ರ ಅನುಸ್ಮರಣೆ ಕಾರ್ಯಕ್ರಮವು ಮಾ.6ರಂದು ಅಸರ್ ನಮಾಝ್ ಬಳಿಕ ಬೋರುಗುಡ್ಡೆಯ ಉಸ್ಮಾನ್ ಬಿನ್ ಅ್ವಾನ್ ಮಸೀದಿಯಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖತೀಬ್ ಎಸ್.ಬಿ.ಮುಹಮ್ಮದ್ ಶರ್ೀ ಅರ್ಶದಿ ವಹಿಸಲಿದ್ದಾರೆ. ಸೈಯದ್ ತ್ವಾಹಾ ಜಿಫ್ರಿ ತಂಳ್ ದುಆಗೈಯುವರು. ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಭಾಷಣಗೈಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ನುಡಿನಮನ ಕಾರ್ಯಕ್ರಮ
ಮಂಗಳೂರು, ಮಾ.4: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ಮಾ.5ರಂದು ಹಿರಿಯ ಶಿಕ್ಷಣ ತಜ್ಞ, ದಿ. ಕೃಷ್ಣಶಾಸಿ ಬಾಳಿಲರಿಗೆ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನ ಪುರಭವನದ ಮುಂಭಾಗದಲ್ಲಿರುವ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ವಸಂತ ಕುಮಾರ್ ತಾಳ್ತಜೆ ಮತ್ತು ರೆನ್ನಿ ಡಿಸೋಜ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







