ಇಂಡಿಯನ್ ವೇಲ್ಸ್ ಟೂರ್ನಿಯಿಂದ ಶರಪೋವಾ ಹೊರಕ್ಕೆ
ಕ್ಯಾಲಿಫೋರ್ನಿಯ, ಮಾ.4: ವಿಶ್ವದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾ ಮುಂದಿನ ನಡೆಯಲಿರುವ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಐದು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಶರಪೋವಾ ಕಳೆದ ಕೆಲವು ತಿಂಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶರಪೋವಾಗೆ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್‌ನ ಅಭ್ಯಾಸ ಟೂರ್ನಮೆಂಟ್‌ನ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು.
ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಶರಪೋವಾ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಶರಣಾಗಿದ್ದರು. ಆ ನಂತರ ಶರಪೋವಾ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸಿಲ್ಲ.
‘‘ಈ ವರ್ಷದ ಇಂಡಿಯನ್ ವೇಲ್ಸ್ಸ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ’’ಎಂದು 2006 ಹಾಗೂ 2013ರಲ್ಲಿ ಇಂಡಿಯನ್ ವೆಲ್ಸ್ ಟ್ರೋಫಿ ಜಯಿಸಿದ್ದ ಶರಪೋವಾ ಹೇಳಿದ್ದಾರೆ.
Next Story





