Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜಾಗತಿಕ ತೈಲ ದರ ಮತ್ತು ಭಾರತೀಯ ಗ್ರಾಹಕ

ಜಾಗತಿಕ ತೈಲ ದರ ಮತ್ತು ಭಾರತೀಯ ಗ್ರಾಹಕ

ರಮಾನಂದ ಶರ್ಮಾ, ಬೆಂಗಳೂರುರಮಾನಂದ ಶರ್ಮಾ, ಬೆಂಗಳೂರು4 March 2016 11:38 PM IST
share

ಭಾರತವು ತನ್ನ ಪೆಟ್ರೋಲಿಯಂ ಅಗತ್ಯದ ಶೇ.85ನ್ನು ಆಮದು ಮಾಡಿಕೊಳ್ಳುತ್ತಿದೆ. ಇದು 2020ರ ಹೊತ್ತಿಗೆ ಶೇ.90ಗೆ ಏರುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಪ್ರತಿವರ್ಷ ಪೆಟ್ರೋಲಿಯಂ ಆಮದು ಶೇ.20ರಷ್ಟು ಏರುತ್ತಿದ್ದು, ಪ್ರತಿದಿವಸ 3 ಲಕ್ಷ ಬ್ಯಾರೆಲ್ ನಷ್ಟು ಏರುತ್ತಿದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲಿಯಂ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೆ ಸ್ಥಾನ ಇದೆ. ಭಾರತ ಪ್ರತಿದಿನ 32,72,000 ಬ್ಯಾರೆಲ್ ಪೆಟ್ರೋಲಿಯಂ ಉಪಯೋಗಿಸುತ್ತಿದ್ದು, ಪ್ರತಿದಿನ 330 ಮಿಲಿಯನ್ ಡಾಲರ್ ನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ.

    ಭಾರತದ ಪೆಟ್ರೋಲಿಯಂ ಅಗತ್ಯದ ಬಹುಪಾಲು ವಿದೇಶಗಳಿಂದ ಬರುವುದರಿಂದ, ಅದರ ದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಮತ್ತು ನಮ್ಮವಿದೇಶಿ ವಿನಿಮಯ ದರದ ಮೇಲೆ ಅವಲಂಬಿಸಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಏರುಪೇರಾದಾಗ, ಅದೇ ಅನುಪಾತದಲ್ಲಿ ಭಾರತದಲ್ಲಿಯೂ ದರ ಏರುಪೇರಾಗುವುದು ಲಾಗಾಯ್ತನಿಂದ ನಡೆದು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದಾ ಏರುತ್ತಿದ್ದ ದರ, ಕಳೆದ ಒಂದು ವರ್ಷದಲ್ಲಿ ಗಮನಾರ್ಹವಾಗಿ ಇಳಿಯುತ್ತಿದೆ. ಬ್ಯಾರೆಲ್‌ಗೆ 118 ಡಾಲರ್ ಇದ್ದ ಪೆಟ್ರೋಲಿಯಂ ಇಂದು 27.50 ಡಾಲರ್‌ಗೆ ಇಳಿದಿದೆ.
ಇದಕ್ಕೆ ಕಾರಣವೇನು?
 1) ಪೆಟ್ರೋಲಿಯಂ ಉತ್ಪಾದಿಸುವ ದೇಶಗಳು ತಮ್ಮ ಉತ್ಪಾದನೆಯನ್ನು ಹೆಚ್ಚಿಸಿವೆ ಮತ್ತು ನಿರ್ಯಾತವನ್ನೂ ಹೆಚ್ಚಿಸಿವೆ.
 2) ಇತಿಹಾಸದಲ್ಲಿ ಪ್ರಥಮ ಬಾರಿ ಸೌದಿ ಅರೇಬಿಯಾ ದೇಶ ತನ್ನ ಬಜೆಟ್ ಕೊರತೆಯನ್ನು ನಿಭಾಯಿಸಲು ತನ್ನ ನಿರ್ಯಾತವನ್ನು ಹೆಚ್ಚಿಸಿದೆ.
 3) ಇರಾನ್ ಮೇಲಿನ ಆರ್ಥಿಕ ನಿರ್ಬಂಧವನ್ನು ತೆಗೆದು ಹಾಕಿದ್ದು, ಅದು ತೈಲ ನಿರ್ಯಾತವನ್ನು ಆರಂಭಿಸುತ್ತಿದೆ.
 4) ರಶ್ಯ ತನ್ನ ಆಂತರಿಕ ಹಣಕಾಸು ವ್ಯವಸ್ಥೆಯನ್ನು ಸರಿದಾರಿಗೆ ತರಲು ತೈಲ ನಿರ್ಯಾತವನ್ನು ಹೆಚ್ಚಿಸಿದೆ.
    5) ಅಮೆರಿಕ ಕೂಡಾ ದೊಡ್ಡ ಪ್ರಮಾಣದಲ್ಲಿ ತೈಲ ನಿರ್ಯಾತವನ್ನು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಬೇಡಿಕೆ -ಪೂರೈಕೆ ಸಮೀಕರಣದಲ್ಲಿ ಬೇಡಿಕೆದಾರನ ಪರವಾಗಿದ್ದು ತೈಲದ ಬೆಲೆ ಇಳಿಯುತ್ತಿದೆ.
 ತೈಲದ ದರ ಯಾವ ದೇಶದಲ್ಲಿ ಹೇಗಿದೆ?
           ಪಾಕಿಸ್ತಾನ-ರೂ.26, ಇಟಲಿ-ರೂ.14, ಬರ್ಮಾ- ರೂ. 30, ಬಾಂಗ್ಲಾದೇಶ-ರೂ. 22, ನೇಪಾಳ- ರೂ.34, ಶ್ರೀಲಂಕಾ- ರೂ.34, ಕ್ಯೂಬಾ-ರೂ.19, ಅಫ್ಘಾನಿಸ್ತಾನ- ರೂ.36, ಭಾರತ -ರೂ.68
    ಭಾರತದಲ್ಲಿ ಮೂಲ ದರ ಲೀ.ಗೆರೂ.16.50
    ಸೆಂಟ್ರಲ್ ತೆರಿಗೆರೂ. 11.80
    ಅಬಕಾರಿರೂ. 9.75
    ವ್ಯಾಟ್‌ರೂ. 4.00
    ರಾಜ್ಯ ತೆರಿಗೆ ರೂ. 8.00
        ಇದು ಲೀಟರ್ ಪೆಟ್ರೋಲ್‌ಗೆ ರೂ.50.05 ಆಗುತ್ತಿದ್ದು, ಉಳಿದ 18 ರೂ.ಗೆ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಇಂಟರ್‌ನೆಟ್‌ನಲ್ಲಿ ಬರುವ ಮಾಧ್ಯಮ ಮಾಹಿತಿಗಳು ಹೇಳುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಅನುಪಾತದಲ್ಲಿ ನಮ್ಮದೇಶದಲ್ಲಿಯೂ ದರ ಇಳಿದಿದ್ದರೆ, ಪೆಟ್ರೋಲ್ ದರ ಲಿಟರ್‌ಗೆ 15-20 ರೂ.ಗಿಂತ ಹೆಚ್ಚಾಗಲಾರದು ಎನ್ನುವುದು ತಜ್ಞರ ಅಭಿಪ್ರಾಯ.
                   ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿದಂತೆ ಅದೇ ಅನುಪಾತದಲ್ಲಿ ದರ ಇಳಿಸುವುದು ಸದಾ ಬದಲಾಗುತ್ತಿರುವ ವಿದೇಶಿ ವಿನಿಮಯ ದರ ಮತ್ತು ಇನ್ನಿತರ ದೇಶದ ಆರ್ಥಿಕ ಸಮಸ್ಯೆಗಳಿಂದಾಗಿ ಸ್ವಲ್ಪ ಕಷ್ಟಸಾಧ್ಯ. ಆದರೆ, ಇಳಿತ ಅನುಪಾತಕ್ಕೆ ಸಮೀಪವಾದರೂ ಇರಬಾರದೇ ಎನ್ನುವುದು ಪ್ರಶ್ನೆ. ಲೀಟರ್‌ಗೆ 38, 63, 74 ಪೈಸೆಗಳ ಇಳಿತ ಯಾವ ಲೆಕ್ಕ. ಈ ಇಳಿತದಿಂದ ಉಳಿದ ಹಣ ಮೋಟು ಬೀಡಿಗೂ ಸಾಕಾಗದು ಎನ್ನುವ ತಮಾಷೆಯಲ್ಲಿ ಅರ್ಥವಿಲ್ಲದಿಲ್ಲ. ಇತ್ತೀಚೆಗೆ ತೈಲದರಗಳು ರೂಪಾಯಿ ಬದಲಿಗೆ ಪೈಸೆ ಲೆಕ್ಕದಲ್ಲಿ ಕಡಿಮೆಯಾಗುತ್ತಿದೆ. ಮಾರುಕಟ್ಟೆ ನಿರ್ದೇಶಿತ ದರ ಇರಬೇಕೆಂದು ಸದಾ ವಾದಿಸುವ ಆರ್ಥಿಕ ಪರಿಣಿತರು ಈ ನಿಟ್ಟಿನಲ್ಲಿ ಮೌನವಾಗಿರುವದು ತೀರಾ ಆಶ್ಚರ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಇಳಿದಂತೆ, ಅದೇ ಅನುಪಾತದಲ್ಲಿ ನಮ್ಮದೇಶದಲ್ಲೂ ದರ ಇಳಿಸಿದರೆ, ತೈಲದ ಬಳಕೆ ನಿಯಂತ್ರಣ ತಪ್ಪುವ ಸಾಧ್ಯತೆ ಇದ್ದು, ಅಂತೆಯೇ ಇಲ್ಲಿ ತೈಲ ದರವನ್ನು ಒಂದು ರೀತಿಯ ಹಿಡಿತದಲ್ಲಿ ಇಳಿಸುತ್ತಾರೆ ಎನ್ನುವ ವಾದವೂ ಇದೆ. ಅವಕಾಶದ ದುರುಪಯೋಗ ಮಾಡಿಕೊಳ್ಳುವುದರಲ್ಲಿ ಭಾರತೀಯರು ನಿಸ್ಸೀಮರು ಎನ್ನುವ ಅನುಭವದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಲೆಕ್ಕಾಚಾರದಿಂದ ಮತ್ತು ದೇಶದ ಸಮಗ್ರ ಹಿತದ ದೃಷ್ಟಿಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯವೂ ಇದೆ.
          ಆದರೆ, ಆಂತರಿಕ ಒಳ ಲೆಕ್ಕಾಚಾರ ಮತ್ತು ಸಮೀಕರಣವನ್ನು ತಿಳಿಯದ ಜನಸಾಮಾನ್ಯರು ಈ ರೀತಿಯ ದರ ಇಳಿತ, ‘‘ಪೆಟ್ರೋಲ್ ದರ ಇಳಿಸಿದ್ದೇವೆ’’ ಎಂದು ಸಾಧನೆಯ ಕಡಿತದಲ್ಲಿ ದಾಖಲಿಸುವುದಕ್ಕಿಂತ ಇನ್ನೇನನ್ನು ಸಾಧಿಸಲು ಸಾಧ್ಯ ಎಂದು ಟೀಕಿಸುತ್ತಾರೆ. ತೈಲ ದರ ಇಳಿದರೂ , ಅಬಕಾರಿ ಸುಂಕ ವಿಧಿಸುತ್ತಿದ್ದು, ಬೆಲೆ ಇಳಿತದ ಲಾಭ ಗ್ರಾಹಕರಿಗೆ ಆಗುತ್ತಿಲ್ಲ ಎಂದೂ ಹೇಳುತ್ತಾರೆ. ಜಾಗತಿಕ ತೈಲ ಬೆಲೆಯ ಇಳಿತದ ಹಿನ್ನೆಲೆಯಲ್ಲಿ ಸರಕಾರವು ಗಮನಾರ್ಹವಾಗಿ ಬೆಲೆಇಳಿಸದಿರುವುದು, ಇದು ಕಾಟಾಚಾರದ ಇಳಿತ ಎಂದು ಸಾಮಾಜಿಕ ಜಾಲತಾಣದಲ್ಲಿ ನಗೆ ಪಾಟಲಿಗೆ ಆಹಾರವಾಗಿದೆ. ಅರಬ್ ದೇಶಗಳಲ್ಲಿ ತೈಲ ಬೆಲೆ ಗುಂಡಿಗಿಳಿದರೂ, ನಮ್ಮಲ್ಲಿ ಇಳಿಯುವುದಿಲ್ಲ ಎಂದು ಹಳ್ಳಿಯ ಹೈದರೂ ಗೊಣಗುತ್ತಿರುವಾಗ, ಸಮಸ್ಯೆಯ ಆಳವನ್ನು ತಿಳಿದು ಸರಕಾರ ಇನ್ನೂ ಹೆಚ್ಚು ಮುತುವರ್ಜಿಯಿಂದ ವರ್ತಿಸಬೇಕಾಗಿತ್ತು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಜನಸಾಮಾನ್ಯರ ಬವಣೆಗಿಂತ ತೈಲ ಮಾರಾಟ ಸಂಸ್ಥೆಗಳ ಕಮಿಶನ್ ಮತ್ತು ತೈಲದ ಮೇಲಿನ ತೆರಿಗೆಯ ಆದಾಯವೇ ಸರಕಾರಕ್ಕೆ ಮುಖ್ಯವಾಯಿತೇ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟವಾಗಿದೆ.

share
ರಮಾನಂದ ಶರ್ಮಾ, ಬೆಂಗಳೂರು
ರಮಾನಂದ ಶರ್ಮಾ, ಬೆಂಗಳೂರು
Next Story
X