ಮನೋಜ್ ಕುಮಾರ್‌ಗೆ ಫಾಲ್ಕೆ

ಹೊಸದಿಲ್ಲಿ, ಮಾ.4: ಹಿರಿಯ ಚಿತ್ರನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ 2015ನೆ ಸಾಲಿನ, 47ನೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ರಾಗಲಿದ್ದಾರೆಂದು ಎಂಐಬಿ ಇಂಡಿಯಾ ಶುಕ್ರವಾರ ಟ್ವೀಟಿಸಿದೆ.
ಈ ಪ್ರಶಸ್ತಿಯನ್ನು ಭಾರತ ಸರಕಾರವು, ಭಾರತೀಯ ಸಿನೆಮಾದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದವರಿಗೆ ನೀಡುತ್ತಿದೆ.
ಮನೋಜ್ ಕುಮಾರ್ ಹರಿಯಾಲಿ ಔರ್ ರಾಸ್ತಾ, ವೋ ಕೌನ್ ಥಿ, ಹಿಮಾಲಯ ಕೀ ಗೋದ್ ಮೇ, ರೋಟಿ ಕಪಡಾ ಔರ್ ಮಕಾನ್ ಹಾಗೂ ಕ್ರಾಂತಿ ಚಿತ್ರಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಅವರು ದೇಶಭಕ್ತಿಯ ವಸ್ತುವಿರುವ ಚಿತ್ರಗಳಲ್ಲಿ ನಟನೆ ಹಾಗೂ ನಿರ್ದೇಶನಗಳಿಗೆ ಹೆಸರಾದವರು. ಮನೋಜ್ ‘ಉಪಕಾರ್’ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. 1992ರಲ್ಲಿ ಭಾರತ ಸರಕಾರವು ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.
Next Story





