ರೈತ ಸೇವಾ ಕೇಂದ್ರವಾಗಿ ಪುಷ್ಪಹರಾಜು ಕೇಂದ್ರ: ಪ್ರಿಯಾಂಕಾ
ಉಡುಪಿ, ಮಾ.4: ನಗರದ ದೊಡ್ಡಣಗುಡ್ಡೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪುಷ್ಪಹರಾಜು ಕೇಂದ್ರವನ್ನು ಮಾದರಿ ರೈತ ಸೇವಾ ಕೇಂದ್ರವನ್ನಾಗಿ ಮಾಡಿ, ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಸದ್ಬಳಕೆ ಮಾಡಲಾಗುವುದು ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ್ರಾನ್ಸಿಸ್ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ವಿವಿಧ ರೈತ ಪರ ಸಂಸ್ಥೆಗಳು, ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಪುಷ್ಪಹರಾಜು ಕೇಂದ್ರದಲ್ಲಿ 16 ಮಳಿಗೆಗಳಿದ್ದು, ರೈತರಿಗೆ ವಿಶ್ರಾಂತಿ ಗೃಹ, ಸಭಾಂಗಣ, ದಾಸ್ತಾನು ಕೊಠಡಿ, ಕ್ಯಾಂಟೀನ್ ಸೇರಿದಂತೆ ಎಲ್ಲ ವ್ಯವಸ್ಥೆಗಳಿವೆ. ಅಗತ್ಯ ಪುಷ್ಪಉತ್ಪಾದನೆ ಇಲ್ಲದಿರುವುದರಿಂದ ಕೇಂದ್ರವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ರೈತ ಸೇವಾ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಸಿಇಒ ಹೇಳಿದರು.
ಹರಾಜು ಕೇಂದ್ರದಲ್ಲಿರುವ ಮಳಿಗೆಗಳಲ್ಲಿ, ಮಲ್ಲಿಗೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೇಂದ್ರ, ಕ್ಯಾಂಪ್ಕೊ ಮಳಿಗೆ, ಕೆಎಂಎ್ ಮಳಿಗೆ, ಹಾಪ್‌ಕಾಮ್ಸ್, ತೋಟಗಾರಿಕಾ ಹಾಗೂ ಕೃಷಿ ಯಂತ್ರಗಳ ಮಾರಾಟ ಮತ್ತು ಸರ್ವಿಸ್, ರಸಗೊಬ್ಬರ ಕೀಟನಾಶಕ ಮಾರಾಟ, ತೋಟಗಾರಿಕಾ ಬೆಳೆಗಳ ರೈತ ಉತ್ಪಾದಕರ ಸಂಸ್ಥೆ, ಹನಿ ನೀರಾವರಿ ಉಪಕರಣ, ಎಟಿಎಂ, ಕೃಷಿ ಚಟುವಟಿಕೆಗೆ ಸಂಬಂಸಿದ ಗ್ರಂಥಾಲಯಗಳನ್ನು ಪ್ರಾರಂಭಿಸಿ ಒಂದೇ ಸೂರಿನಡಿ ರೈತರ ಅಗತ್ಯತೆಗಳನ್ನು ಪೂರೈಸುವ ಕೇಂದ್ರವನ್ನಾಗಿ ಮಾಡಲಾಗುವುದು ಎಂದವರು ಭರವಸೆ ನೀಡಿದರು.
ಈ ಕುರಿತು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಎಲ್ಲ ಸಂಸ್ಥೆಗಳು, ಕೃಷಿಕರು, ಮಾರಾಟಗಾರರು ತಮ್ಮ ಅಭಿಪ್ರಾಯಗಳನ್ನು ಹಾಗೂ ಅಗತ್ಯತೆಗಳ ವಿವರಗಳನ್ನು ನೀಡುವಂತೆ ಸಿಇಒ ಮನವಿ ಮಾಡಿದರು. ಮಳಿಗೆಗಳಿಗೆ ಕಡಿಮೆ ಬಾಡಿಗೆ ವಿಸುವಂತೆ ಮತ್ತು ಶೈತ್ಯಾಗಾರದ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಉಪಸ್ಥಿತರಿದ್ದರು.







