‘ಪರವಿದ್ಯಾಸದನ’ ಸಮುಚ್ಚಯ ಉದ್ಘಾಟನೆ

ಪಡುಬಿದ್ರೆ, ಮಾ.4: ಪಲಿಮಾರು ಮಠದ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀಹೃಷಿಕೇಶತೀರ್ಥ ಪೀಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀಯೋಗ ದೀಪಿಕಾ ವಿದ್ಯಾಪೀಠ, ತತ್ವಸಂಶೋಧನ ಸಂಸತ್, ವಿಶಾಲ ಸಭಾಂಗಣವನ್ನು ಹೊಂದಿರುವ ‘ಪರವಿದ್ಯಾಸದನ’ ಸಮುಚ್ಚಯವನ್ನು ಪಲಿಮಾರು ಮಠಾೀಶ ಶ್ರೀವಿದ್ಯಾ ೀಶತೀರ್ಥ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು.
ಅದಮಾರು ಕಿರಿಯ ಮಠಾೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸರ್ವಮೂಲ ಸಂಚಿಕೆ ಆಂಗ್ಲ ಆವೃತ್ತಿಯನ್ನು ಮಂಗಳೂರು ಕರಾವಳಿ ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಬಿಡುಗಡೆಗೊಳಿಸಿದರು. ಕಿರುತೆರೆ ನಟ ಕಾರ್ತಿಕ್ ಸಾಮಗರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂಗೀತ ನಿ ವಿದ್ಯಾಭೂಷಣ್, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ುಟಾರ್ಡೊ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹುಬ್ಬಳ್ಳಿಯ ಉದ್ಯಮಿ ಶ್ರೀಕಾಂತ್ ಕೆಮ್ತೂರು ಉಪಸ್ಥಿತರಿದ್ದರು. ಶಂಕರನಾರಾಯಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.





