ಅನಂತಕುಮಾರ್ ಹೆಗಡೆ ಹೇಳಿಕೆಗೆ ಖಂಡನೆ: ಇಂದು ಗಂಗೊಳ್ಳಿ ಬಂದ್‌ಗೆ ಕರೆ
ಗಂಗೊಳ್ಳಿ, ಮಾ.4: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಇಸ್ಲಾಂ ವಿರೋಧಿ ಹೇಳಿಕೆಯನ್ನು ಖಂಡಿಸಿ ವಿವಿಧ ಮುಸ್ಲಿಮ್ ಸಂಘಟನೆಗಳು ಮಾ.5ರಂದು ಗಂಗೊಳ್ಳಿ ಬಂದ್‌ಗೆ ಕರೆ ನೀಡಿವೆ.
ಪಿಎಫ್‌ಐ ಗಂಗೊಳ್ಳಿ ಘಟಕ, ಗಂಗೊಳ್ಳಿಯ ಅಂಜು ಮಾನ್ ನೂರುಲ್ ಇಸ್ಲಾಂ, ಎಸ್ಸೆಸ್ಸೆಫ್, ಜಮಾಅತೆ ಇಸ್ಲಾಮಿ ಹಿಂದ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್, ಜಾಮಿಯಾ ಸೂಪರ್‌ಸ್ಟಾರ್ ಫ್ರೆಂಡ್ಸ್, ಸೋಶಿಯಲ್ ವೆಲ್ಫೇರ್ ಫೆಡರೇಶನ್‌ಗಳು ಈ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳು, ಕಾರ್, ರಿಕ್ಷಾ ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸಲಿವೆ.
ಆತಂಕವನ್ನು ಸೃಷ್ಟಿಸುವ, ಕೋಮು ಪ್ರಚೋದನೆ ಹಾಗೂ ಗಲಭೆ ಆಹ್ವಾನ ನೀಡುವ ಸಂಸದ ಅನಂತ್ ಕುಮಾರ್‌ರನ್ನು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





