ಸೌಕೂರು: ಮಗುವಿನ ಸರ ಅಪಹರಣ
ಕುಂದಾಪುರ, ಮಾ.4: ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಜಾತ್ರೆಯಲ್ಲಿ ಕರ್ಕುಂಜೆಯ ನಾಗರತ್ನಾ ಎಂಬವರು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಅಂಗಡಿಯೊಂದರಲ್ಲಿ ವಸ್ತು ಖರೀದಿಸುತಿದ್ದ ವೇಳೆ ಸುಮಾರು 20ರಿಂದ 25 ವರ್ಷ ಪ್ರಾಯದ ಯುವಕನೊಬ್ಬ ಮಗುವಿನ ಕುತ್ತಿಗೆಯಲ್ಲಿದ್ದ ಐದೂವರೆ ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳವಾದ ಸೊತ್ತಿನ ವೌಲ್ಯ 12,000ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





