ಪ್ರಧಾನಿ ಕಾರ್ಯಕ್ರಮಕ್ಕಾಗಿ ತಮ್ಮ ಬೆಳೆ ಕಟಾವಿಗೆ ರೈತರ ನಿರಾಕರಣೆ
ಹಾಜಿಪುರ, ಮಾ.4: ಮಾ.12ರಂದು ಕೆಲವು ರೈಲ್ವೆ ಯೋಜನೆಗಳನ್ನು ಅನಾವರಣ ಗೊಳಿಸಲಿರುವ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕಾಗಿ ಇಲ್ಲಿಯ ಸುಲ್ತಾನಪುರ ಗ್ರಾಮದಲ್ಲಿ ನಿಗದಿಯಾಗಿರುವ ಸ್ಥಳಕ್ಕೆ ಈಗ ಸಮಸ್ಯೆ ಎದುರಾಗಿದೆ. ಈ ಪ್ರದೇಶದಲ್ಲಿ 60 ಎಕರೆ ವಿಸ್ತೀರ್ಣದಲ್ಲಿರುವ ಇನ್ನೂ ಕಟಾವಿಗೆ ಬಾರದ ತಮ್ಮ ಗೋಧಿ ಬೆಳೆಯನ್ನು ಕೊಯ್ಯಲು ರೈತರು ನಿರಾಕರಿಸಿದ್ದಾರೆ.
ಬಿಹಾರದ ಈ ಗ್ರಾಮ ಹಾಜಿಪುರ ಜಿಲ್ಲಾ ಕೇಂದ್ರದಿಂದ ಆರು ಕಿ.ಮೀ.ಅಂತರದಲ್ಲಿದೆ. ಈ ವಿಷಯವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ರಚನಾ ಪಾಟೀಲ್ ಅವರು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪರ್ಯಾಯ ಸ್ಥಳಕ್ಕಾಗಿ ನಾವು ಹುಡುಕು ತ್ತಿದ್ದೇವೆ ಎಂದು ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅರವಿಂದ ಕುಮಾರ್ ರಜಕ್ ತಿಳಿಸಿದರು. ಪ್ರಧಾನಿಯವರು ಮಾ.12ರಂದು ದಿಘಾ-ಸೋನೆಪುರ ರೈಲ್ವೆ-ರಸ್ತೆ ಸೇತುವೆ ಮತ್ತು ಮುಂಗೇರ್‌ನ ನೂತನ ರೈಲ್ವೆ ಸೇತುವೆ ಯನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
ರೈಲ್ವೆ ಸಚಿವ ಸುರೇಶ ಪ್ರಭು ಮತ್ತು ಅವರ ಸಹಾಯಕ ಸಚಿವ ಮನೋಜ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ ಪ್ರಧಾನಿಯವರು ಕೆಲವು ರೈಲುಗಳಿಗೆ ಹಸಿರು ನಿಶಾನೆಯನ್ನೂ ತೋರಿಸಲಿದ್ದಾರೆ. ಅದೇ ದಿನ ಪಟ್ನಾ ಉಚ್ಚ ನ್ಯಾಯಾ ಲಯದ ಶತಾಬ್ದಿ ಆಚರಣೆಯ ಸಮಾ ರೋಪ ಸಮಾರಂಭದಲ್ಲಿಯೂ ಪ್ರಧಾನಿ ಭಾಗವಹಿಸಲಿದ್ದಾರೆ.







