ಕುಂದಾಪುರ, ಮಾ.4: ಕೋಟೇಶ್ವರದ ಗಾಂಧಿ ಸರ್ಕಲ್ ಬಳಿ ಇರುವ ಕೋಟಿಲಿಂಗೇಶ್ವರ ಟವರ್ಸ್‌ನ ಒಂದನೆ ಮಹಡಿಯಲ್ಲಿರುವ ಸನ್ನಿಧಿ ಮೊಬೈಲ್ ಅಂಗಡಿಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿ 24,000 ರೂ. ವೌಲ್ಯದ 11 ಮೊಬೈಲ್ ಫೋನ್ ಹಾಗೂ ನಗದನ್ನು ಕಳವುಗೈದಿರುವುದಾಗಿ ಸುರೇಶ್ ಪೂಜಾರಿ ಎಂಬವರು ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.