ಸಿಪಿಎಂ ಪರ ಕನ್ನಯ್ಯ ಪ್ರಚಾರ: ಯಚೂರಿ

ಹೊಸದಿಲ್ಲಿ: ಜವಾಹರ್ ಲಾಲ್ ವಿವಿಯ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಪರ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿದ್ದಾರೆ.
ಎಡಪಕ್ಷವನ್ನು ಬೆಂಬಲಿಸುವ ಎಲ್ಲ ವಿದ್ಯಾರ್ಥಿಗಳೂ ಕನ್ನಯ್ಯರೊಂದಿಗೆ ಇರಲಿದ್ದಾರೆ. ಎಡಪಂಥೀಯ ಸಂಘಟನೆಗಳ ಯುವಕರ ಶಕ್ತಿ ಏನೆಂಬುದನ್ನು ದೇಶ ಮೊದ ಬಾರಿಗೆ ಕಾಣುತ್ತಿದೆ ಎಂದು ಯಚೂರಿ ಹೇಳಿದರು.
ಕನ್ನಯ್ಯ ಕುಮಾರ್ ಭಾಗವಹಿಸುವಂತೆ ಹಾಗೂ ಪ್ರಚಾರ ನಡೆಸುವಂತೆ ಭಾರತದ ವಿವಿಧ ಪ್ರದೇಶಗಳಲ್ಲಿರುವವರು ಆಗ್ರಹಿಸಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ತಿಳಿಸಿದ್ದಾರೆ.
ಜೆಎನ್‌ಯು ಪ್ರಕರಣ ದೇಶದ ಗಮನ ಸೆಳೆದದ್ದರಿಂದ ಕನ್ನಯ್ಯ ಕುಮಾರ್‌ರಿಂದ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಸಿಪಿಐ ಆಸಕ್ತಿ ತೋರಿಸಿದೆ.
Next Story





