ಬಂದರ್: SKSM ನಿಂದ ಧಾರ್ಮಿಕ ಪ್ರವಚನ ಹಾಗೂ ಪುಸ್ತಕ ಬಿಡುಗಡೆ

ಮಂಗಳೂರು, ಮಾ.5: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಕುದ್ರೋಳಿ ಘಟಕದ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಬಂದರ್ ಕಂಡತ್ ಪಳ್ಳಿ ಸಮೀಪದ ಭಟ್ಕಳ್ ಬಝಾರ್ ನಲ್ಲಿ ಮಾರ್ಚ್ 4 ರಂದು ಸಂಜೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೌಲವಿ ಸಲೀಂ ಹಮದನಿ ನೈಜ ಅಹ್ಲುಸ್ಸುನ್ನ ವಲ್ ಜಮಾಅಃ ಎಂಬ ವಿಷಯದಲ್ಲಿ ಹಾಗೂ ಕುದ್ರೋಳಿ ಸಲಫಿ ಮಸೀದಿಯ ಖತೀಬ್ ಮೌಲವಿ ಮುಸ್ತಫಾ ದಾರಿಮಿ ತೌಹೀದ್ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನಡೆಸಿದರು.
ಈ ಸಂದರ್ಭ ಮುಸ್ಲಿಂಮೇತರರಿಗೆ ಉಚಿತ ವಿತರಣೆಗಾಗಿ ಹಿರಿಯ ಲೇಖಕ ಇಸ್ಮಾಯಿಲ್ ಶಾಫಿ ಬರೆದ " ಇಸ್ಲಾಂ -ಸೃಷ್ಟಿಕರ್ತನ ಸಂದೇಶ " ಕೃತಿಯನ್ನು ನಾಸಿರ್ ಯಾದ್ಗರ್ ಬಿಡುಗಡೆಗೊಳಿಸಿದರು.
ಇಸ್ಮಾಯಿಲ್ ಶಾಫಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೋಪಿಸಿ ವಂದಿಸಿದರು.
ವೇದಿಕೆಯಲ್ಲಿ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಕೇಂದ್ರ ಸಮಿತಿ ಅಧ್ಯಕ್ಷ ಯು.ಏನ್ ಅಬ್ದುಲ್ ರಝಾಕ್, ದಕ್ಷಿಣ ಕನ್ನಡ ಪುಟ್ಬಾಲ್ ಅಸೂಸಿಯೆಶನ್ ಅಧ್ಯಕ್ಷ ಡಿ.ಎಂ ಅಸ್ಲಾಂ, ಅಯ್ಯುಬ್, ಸಾದಿಕ್, ಬಿ.ಎಸ್ ಇಮ್ತಿಯಝ್ ಉಪಸಿತರಿದ್ದರು.











