ಮದುವೆ ಮೊದಲೇ ವರ ಪರಾರಿ, ಪೊಲೀಸರ ಸಮ್ಮುಖದಲ್ಲಿ ತಮ್ಮನೊಂದಿಗೆ ನಿಶ್ಚಿತಾರ್ಥ ಮಾಡಿಸಿದ ಪಂಚಾಯತ್

ಗಾಝಿಯಾಬಾದ್,ಮಾರ್ಚ್.5: ಮಸೂರಿಯ ಗ್ರಾಮವೊಂದರಲ್ಲಿ ಮದುವೆಯ ಮೊದಲೇ ವರ ಪರಾರಿಯಾಗಿದ್ದಾನೆ. ವಧುವಿನ ಕಡೆಯವರು ನಿಶ್ಚಿತಾರ್ಥಕ್ಕಾಗಿ ವಿಧಿವಿಧಾನಗಳನ್ನು ಪೂರೈಸಲು ಬಂದಾಗ ಇದನ್ನು ತಿಳಿದು ಅವರು ಗಲಾಟೆಗಿಳಿದಿದ್ದರು. ವಿಷಯ ತಿಳಿದು ಪೊಲೀಸರು ಅಲ್ಲಿಗೆ ಆಗಮಿಸಿ ವಧುವಿನ ಕಡೆಯವರನ್ನು ಸಮಧಾನಿಸಿದ್ದಾರೆ. ನಂತರ ಗ್ರಾಮ ಪಂಚಾಯತ್ ನಡೆದು ವರನ ಬದಲಿಗೆ ಅವನ ತಮ್ಮನಿಗೆ ವಧುವನ್ನು ವಿವಾಹ ನಡೆಸಬೇಕು. ನಿಗದಿತ ದಿನಾಂಕದಂದೇ ಮದುವೆ ನಡೆಯಬೇಕೆಂದು ತೀರ್ಪು ನೀಡಲಾಗಿದೆ.
ಮೀರತ್‌ನಧರ್ಮಪಾಲ್ ಸಿಂಗ್ ತನ್ನ ಮಗಳ ನಿಶ್ಚಿತಾರ್ಥಕ್ಕಾಗಿ ಗಾಝಿಯಾಬಾದ್ ಮಸೂರಿಯ ಭುರ್‌ಗಡಿಗೆ ಬಂದಿದ್ದರು. ಆದರೆ ಅಲ್ಲಿ ಬಂದು ನೋಡುವಾಗ ಶ್ಯಾಮ್‌ಪಾಲ್ ಸಿಂಗ್‌ರ ಮಗ ಕರಣ್ ಸಿಂಗ್ ತನ್ನಗೆಳೆಯರೊಂದಿಗೆ ಪರಾರಿಯಾಗಿದ್ದ. ಈ ಕುರಿತು ಏನೂ ಹೇಳದಿದ್ದಾಗ ಸಂಜೆ ಎಂಟುಗಂಟೆಗೆ ವಧುವಿನ ಕಡೆಯವರು ಮಸೂರಿ ಠಾಣೆಗೆ ಹೋಗಿ ಪೊಲೀಸರಿಗೆ ಪಿರ್ಯಾದು ನೀಡಿದರು. ಪೊಲೀಸರು ಘಟನೆಯ ಸ್ಥಳಕ್ಕೆಹೋದಾಗ ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಗ್ರಾಮ ಪಂಚಾಯತ್‌ನಲ್ಲಿ ಪೊಲೀಸರ ಸಮ್ಮುಖದಲ್ಲಿ ಶ್ಯಾಮಪಾಲ್ ಸಿಂಗ್ ತನ್ನ ಮೂರನೆ ಪುತ್ರ ಹರೇಂದ್ರ ಸಿಂಗ್‌ಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು. ಮತ್ತು ವಿವಾಹ ನಿಗದಿತ ಸಮಯದಂತೆ ವರ ತಮ್ಮನೊಂದಿಗೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ಧಾರೆ.





