ಉಪ್ಪಿನಂಗಡಿ: ಲಾರಿ ಢಿಕ್ಕಿ; ಬಿಹಾರ ಮೂಲದ ವ್ಯಕ್ತಿ ಮೃತ್ಯು
ಉಪ್ಪಿನಂಗಡಿ, ಮಾ.5: ಇಲ್ಲಿಗೆ ಸಮೀಪದ ಗೋಳಿತೊಟ್ಟು ಎಂಬಲ್ಲಿ ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ಬಿಹಾರ ಮೂಲದ ವ್ಯಕ್ತಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾತ ಮೃತಪಟ್ಟ ಘಟನೆ ವರದಿಯಾಗಿದೆ.
ಬಿಹಾರದ ಪಾಟ್ನ ನಿವಾಸಿ ಬಿರ್ಜು (36) ಮೃತರು ಎಂದು ಗುರುತಿಸಲಾಗಿದೆ. ಸಾರಣೆ ಕೆಲಸಕ್ಕೆಂದು ಗೋಳಿತೊಟ್ಟುವಿಗೆ ಬಂದಿದ್ದರು. ರಾತ್ರಿ ವೇಳೆ ಹೆದ್ದಾರಿ ದಾಟುತ್ತಿದ್ದ ಅವರಿಗೆ ಲಾರಿ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ತಿಳಿದು ಬಂದಿದೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
Next Story





