ಮಾಯಾವತಿ ಕೇವಲ ಕಲ್ಲನ್ನು ಉಜ್ಜಿಸಿದ್ದರು: ಉ.ಪ್ರ. ಮುಖ್ಯಮಂತ್ರಿ ಅಖಿಲೇಶ್ ಯಾದವ್

ಲಕ್ನೊ,ಮಾರ್ಚ್.5:ಉತ್ತರ ಪ್ರದೇಶದ ಬಜೆಟ್ ಚರ್ಚೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಎಸ್ಪಿ ನಾಯಕಿ ಮಾಯಾವತಿಯ ವಿರುದ್ಧ ಕಟು ಟೀಕೆ ಮಾಡಿದ್ದಾರೆ. ಸಮಾಜವಾದಿ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೇರಿಸಿದೆ. ತನ್ನ ಕಾರ್ಯಾವಧಿಯಲ್ಲಿ ಬಿಎಸ್ಪಿ ಕಲ್ಲು ತಿಕ್ಕುವ ಕೆಲಸ ಮಾಡಿತ್ತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮುಖ್ಯಮಂತ್ರಿ ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಪ್ರದೇಶಾದ್ಯಂತ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ. ಪರೀಕ್ಷೆ ಸಮಯದಲ್ಲಿ ಗ್ರಾಮಗಳಿಗೆ ಇಪ್ಪತ್ತನಾಲ್ಕು ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ. ಅದೇ ವೇಳೆ ಮಾಯಾವತಿ ಸರಕಾರ ತನ್ನ ಕಾಲಾವಧಿಯನ್ನು ಕಲ್ಲುಗಳಿಗೆ ಹಾಗೂ ಸ್ಮಾರಕಗಳಿಗಾಗಿ ಹಣವನ್ನು ವ್ಯಯಿಸಿದೆ ಎಂದು ಹೇಳಿದರು. ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ಮೂರ್ತಿ ಇರಿಸುವವರಿಗೆ ವೊಟು ನೀಡಲಾರರು ಎಂದು ಹೇಳಿದ್ದಾರೆ. ಸಮಾಜವಾದಿಸರಕಾರ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳವನ್ನು ಸಾಧಿಸಿದೆ. ಲಲಿತಪುರ ಪವರ್ ಪ್ಲಾಂಟ್‌ನಿಂದಲೂ ವಿದ್ಯುತ್ ದೊರಕಲಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ.
ಪ್ರದೇಶದಲ್ಲಿ ಚತುಷ್ಪಥ ರಸ್ತೆಗಳಾಗುತ್ತಿವೆ ಅದೇ ವೇಳೆ ಮಾಯಾವತಿ ರಸ್ತೆ ಮಾಡುವ ವಿಚಾರದಲ್ಲಿ ರೈತರನ್ನು ಜೈಲಿಗೆ ಹಾಕಿಸಿದ್ದರು. ಆದರೆ ನಮ್ಮ ಎಕ್ಸ್‌ಪ್ರೆಸ್ ವೇ ಬಿಎಸ್ಪಿಗಿಂತ ಭಿನ್ನವಾದುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಬಿಎಸ್ಪಿ ಸರಕಾರ ಸಕ್ಕರ ಕಾರ್ಖಾನೆಯನ್ನು ಮಾರಿತು. ನಾವು ಸಕ್ಕರೆ ಕಾರ್ಖಾನೆಯನ್ನು ಮಾಡಿದೆವು. ಕಬ್ಬು ಬೆಳೆಗಾರರಿಗೆ ಬಾಕಿಯನ್ನು ಕೂಡಾ ಆದಷ್ಟು ಬೇಗ ಸಂದಾಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಲೋಹಿಯಾ ಆವಾಸ್ ಯೋಜನೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗಿದೆ. ಸರಕಾರ ಬುಂದೇಲ್ ಖಂಡದಲ್ಲಿ ಪ್ರತಿಯೊಬ್ಬ ಬಡ ಮಹಿಳೆಗೆ ಪೆನ್ಶನ್ ನೀಡಲಿದೆ. ರಾಜ್ಯದಲ್ಲಿ ನಾಲ್ಕು ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲಾಗಿದೆ. ಯುವಕರು, ರೈತರು ಮತ್ತುಬಡವರಿಗಾಗಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ. ವಿಧಾನ ಸಭೆಯಲ್ಲಿ ವಿಪಕ್ಷಗಳು ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿ ಗದ್ದಲ ವೆಬ್ಬಿಸಿದ್ದವು. ಸಚಿವೆ ಗಾಯತ್ರಿ ಪ್ರಸಾದ್ ಪ್ರಜಾಪತಿಯವರಿಗೆ ಮುತ್ತಿಗೆ ಹಾಕಿದ್ದವು. ಬಿಜೆಪಿ ಮತ್ತು ಬಿಎಸ್ಪಿ ಶಾಸಕರು ಸರಕಾರದ ಉತ್ತರದಿಂದ ಅಸಮಾಧಾನಗೊಂಡು ಸಭಾತ್ಯಾಗ ಮಾಡಿದ್ದರು.







