ಸಂಸದ ಅನಂತ್ ಕುಮಾರ್ ವಿರುದ್ಧ ಕ್ರಮಕ್ಕೆ SKSM ಆಗ್ರಹ

ಮಂಗಳೂರು,ಮಾ.5: ಸಂಸದ ಅನಂತ್ ಕುಮಾರ್ ಹೆಗಡೆ ಇತ್ತೀಚೆಗೆ ನೀಡಿರುವ ಮುಸ್ಲಿಮ್ ವಿರೋಧಿ ಹೇಳಿಕೆಯು ಧರ್ಮ ನಿಂದನೆಯಾಗಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (SKSM) ಕೇಂದ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಹೇಳಿದ್ದರೆ.
ನಗರದಲ್ಲಿ ಪ್ರತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅನಂತ್ ಕುಮಾರ್ ಈ ರೀತಿಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ವಿಷಯ. ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧ ಕಲ್ಪಿಸುವ ಅವರು ನಮ್ಮೊಡನೆ ಚರ್ಚೆಗೆ ಬರಲಿ.ಇಂತಹ ಹೇಳಿಕೆ ನೀಡಿರುವ ಹೆಗಡೆಯವರ ವಿರುದ್ಧ ಬಿಜೆಪಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ SKSM ಸಂಘಟನೆಯ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಬಶೀರ್ ಅಹ್ಮದ್, ಎಂ.ಜಿ ಮುಹಮ್ಮದ್, ಅಹ್ಮದ್ ಅನ್ಸಾರ್, ಮೌಲವಿ ಮುಸ್ತಫಾ ದಾರಿಮಿ ಉಪಸ್ಥಿತರಿದ್ದರು.
Next Story





