ದೇಶದ್ರೋಹಿಗಳನ್ನು ಬೆಂಬಲಿಸುವ ರಾಹುಲ್‌ಗೆ ನಾಚಿಗೆಯಾಗಬೇಕು: ಅಮಿತ್ ಶಾ
ಯುವ ಮೋರ್ಚಾ ರ್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ಉರಿದೆದ್ದ ಅಮಿತ್ ಶಾ
.jpg)
ಮಥುರಾ, ಮಾರ್ಚ್.5: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೃಷ್ಣ ನಗರವಾದ ಮಥುರಾದ ವೃಂದಾವನದಲ್ಲಿ ಇಂದು ಬಿಜೆಪಿ ಯುವ ಮೋರ್ಚಾದ ರ್ಯಾಲಿಯನ್ನುದ್ದೇಶಿಸಿ ಮಾತಾಡುತ್ತಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮೇಲೆ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಜೆಎನ್‌ಯು ವಿವಾದದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ವಹಿಸಿದ ಪಾತ್ರ ಅವರನ್ನು ಉರಿಯುವಂತೆ ಮಾಡಿಸಿದೆ.
ಅಮಿತ್ ಶಾ ದಿಲ್ಲಿ ಜೆಎನ್‌ಯು ನಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಯಿತು ಅಲ್ಲಿ ಭಯೋತ್ಪಾದಕ ಅಫ್ಝಲ್‌ಗುರು ಪರ ಘೋಷಣೆ ಕೂಗಲಾಯಿತು.ಈ ದೇಶದ್ರೋಹಿಗಳನ್ನು ರಾಹುಲ್‌ಗಾಂಧಿ ಬೆಂಬಲಿಸುತ್ತಿದ್ದಾರೆ. ರಾಹುಲ್ ಗಾಂಧಿ ಆ ದೇಶದ್ರೋಹಿಗಳ ಮಾತನ್ನು ಕೇಳಬೇಕೆಂದು ಹೇಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಅಮಿತ್ ಶಾ ಉರಿದೆದ್ದಿದ್ದಾರೆ.
Next Story





