ಪಾಕಿಸ್ತಾನಕ್ಕೆ ಹೋಗಲಿದ್ದಾರೆ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್!
.jpg)
ಹೊಸದಿಲ್ಲಿ,ಮಾರ್ಚ್. 5: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನಕ್ಕೆ ಪ್ರವಾಸ ಹೋಗಲಿದ್ದಾರೆ. ಪಾಕಿಸ್ತಾನದ ಕರಾಚಿ ನಗರದಲ್ಲಿ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ದಿಲ್ಲಿ ಮುತ್ರಿಗೆ ಈ ಕುರಿತು ಆಹ್ವಾ ನೀಡಲಾಗಿದ್ದು ಅದನ್ನು ಅವರು ಸ್ವೀಕರಿಸಿದ್ದಾರೆ. ಕರಾಚಿ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಅನುಪಮ್ ಖೇರ್‌ರಿಗೆ ಇದರಲ್ಲಿ ಭಾಗವಹಿಸಲು ವೀಸಾ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ವಿವಾದಾಸ್ಪದವಾಗಿತ್ತು. ಖೇರ್‌ರ ನಂತರ ನಂದಿತಾ ದಾಸ್ ಅನಾರೋಗ್ಯ ಕಾರಣ ಮುಂದೊಡ್ಡಿ ಸಾಹಿತ್ಯ ಹಬ್ಬದಿಂದ ದೂರ ಉಳಿದಿದ್ದಾರೆ. ಕೇಜ್ರಿವಾಲ್ ತನಗೆ ನೀಡಿದ ಆಮಂತ್ರಣವನ್ನು ಸ್ವೀಕರಿಸಿದ್ದಾರೆ.
Next Story





