ಕಿನ್ನಿಗೋಳಿ:ಮಾ. 8 ರಂದು ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ
ಕಿನ್ನಿಗೋಳಿ, ಮಾ.5: ಯಕ್ಷಲಹರಿ ಕಿನ್ನಿಗೋಳಿಯ ಆಶ್ರಯದಲ್ಲಿ ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಮಾ. 8 ಮಂಗಳವಾರ ಕಿನ್ನಿಗೋಳಿ ಮಹಮ್ಮಾಯೀ ಬಿಂಬ ಪ್ರತಿಷ್ಠಾ ಕಟ್ಟೆಯಲ್ಲಿ ನಡೆಯಲಿದೆ.
ಕವಿ ಪ್ರಸಂಗಕರ್ತ ಗಣೇಶ ಕೊಲಕಾಡಿ ಅವರಿಗೆ ಯಕ್ಷಕವಿ ಸಮ್ಮಾನ ಹಾಗೂ ಸಾಧಕ ಐಕಳ ಹರೀಶ್ ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಇದೇ ಸಂದರ್ಭ ಮೂರುಕಾವೇರಿ ಮಹಮ್ಮಾಯೀ ದೇವಳದ ಅರ್ಚಕರಾಗಿದ್ದ ದಿ. ಶಿವಪ್ಪ ರಾಣ್ಯ ಕುಟುಂಬಕ್ಕೆ ಐಕಳ ಹರೀಶ ಶೆಟ್ಟಿ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದು, ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ಹಾಗೂ ಯುಗಪುರುಷದ ಭುವನಾಭಿರಾಮ ಉಡುಪ ಶುಭಾಶಂಸನೆಗೈಯಲಿದ್ದಾರೆ. ಮುಂಬಯಿ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆ, ಮುಂಬಯಿ ಉದ್ಯಮಿಗಳಾದ ಐಕಳ ಗುಣಪಾಲ ಶೆಟ್ಟಿ, ವಿಜಯ ಭಂಡಾರಿ, ಧನಪಾಲ ಬಿ. ಶೆಟ್ಟಿ ತಾಳಿಪಾಡಿಗುತ್ತು, ಉದಯ ಶೆಟ್ಟಿ ಕೆರೆಗುತ್ತು ಮಹಾಬಲ ಶೆಟ್ಟಿ ಐಕಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಯಕ್ಷಲಹರಿಯ ಅಧ್ಯಕ್ಷ ಪಿ. ಸತೀಶ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







