ಕೇರಳದಲ್ಲಿ ಎಲ್‌ಡಿಎಫ್, ತಮಿಳ್ನಾಡಿನಲ್ಲಿ ಜಯಲಲಿತಾ.,ಪ.ಬಂಗಾಳದಲ್ಲಿ ಮಮತಾ, ಅಸ್ಸಾಂನಲ್ಲಿ ಬಿಜೆಪಿ
ಇಂಡಿಯ ಟಿವಿ_ ಸಿವೊಟರ್ ಸಮೀಕ್ಷೆ

ಹೊಸದಿಲ್ಲಿ,ಮಾರ್ಚ್.5: ಕೇರಳದಲ್ಲಿ ಎಡಪಕ್ಷಗಳು ಅಧಿಕಾರಕ್ಕೆ, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ತಮಿಳ್ನಾಡ್‌ನಲ್ಲಿ ಜಯಲಲಿತಾ ಮತ್ತೆ ಅಧಿಕಾರಕ್ಕೇರಳಿದ್ದಾರೆ ಎಂದು ಇಂಡಿಯ ಟಿವಿ-ಸಿ ವೊಟರ್ ಸಮೀಕ್ಷೆ ಬಹಿರಂಗ ಪಡಿಸಿದೆ. ಕೇರಳದಲ್ಲಿ ಎಡ ಪಕ್ಷಕ್ಕೆ 89 ಸೀಟುಗಳು, ಯುಡಿಎಫ್‌ಗೆ 49ಸ್ಥಾನಗಳು ಸಿಗಲಿವೆ ಎಂದು ಅದು ಸೂಚಿಸಿದೆ. ಕೇರಳದಲ್ಲಿ ಈಗ ಕಾಂಗ್ರೆಸ್ ಸರಕಾರ ಇದೆ. ಇಲ್ಲಿ ಬಿಜೆಪಿ ಒಂದು ಸ್ಥಾನಗಳಿಸಿ ಖಾತೆ ತೆರೆಯಲಿದೆ. ಎಲ್‌ಡಿಎಫ್‌ಗೆ44.6ಶೇಕಡಾ ಮತ ಲಭಿಸಿದರೆ, ಯುಡಿಎಫ್‌ಗೆ 38.1ಶೇಕಡಾ ಮತ ಸಿಗಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಕೇರಳದಲ್ಲಿ ಸರಕಾರ ಬದಲಾವಣೆ ಸುನಿಶ್ಚಿತ ಎಂದು ಈ ಹಿಂದೆ ಕೇರಳದ ಎರಡು ಚ್ಯಾನೆಲ್‌ಗಳ ಸರ್ವೇ ಫಲಿತಾಂಶದಲ್ಲಿ ಬಹಿರಂಗವಾಗಿತ್ತು. ಎಡ ಪಕ್ಷ ಜಯಶಾಲಿಯಾಗಲಿದೆ ಎಂದು ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಪ್ರಚಾರದಲ್ಲಿವೆ.ಬಂಗಾಳದಲ್ಲಿ 294 ಸ್ಥಾನಗಳಲ್ಲಿ 156 ಸ್ಥಾನಗಳಿಸಿ ಮತ್ತೆ ಮಮತಾ ಬ್ಯಾನರ್ಜಿ ಸರಕಾರ ಅಧಿಕಾರಕ್ಕೇರಲಿದೆ. ಎಡಪಕ್ಷಗಳು ಅಲ್ಲಿ ಈಗಿನ ಅರುವತ್ತು ಸ್ಥಾನಗಳನ್ನು 114ಕ್ಕೇರಿಸಲಿವೆ. ಬಿಜೆಪಿ 42ರಿಂದ 13ಕ್ಕೆ ತಲುಪಲಿದೆ. ಇತರರಿಗೆ ಏಳು ಸ್ಥಾನಗಳು ಲಭಿಸಲಿವೆ. ಸರ್ವೇ ತಿಳಿಸಿದೆ. ತಮಿಳ್ನಾಡಿನಲ್ಲಿ 234 ಸ್ಥಾನಗಳಿರುವ ವಿಧಾನಸಭೆಯಲ್ಲಿ 116 ಸ್ಥಾನಗಳನ್ನು ಜಯಲಲಿತಾರ ಎಐಡಿಎಂಕೆ ಪಡೆಯಲಿದೆ. ಕಳೆದ ಸಲ ಅವರಿಗೆ 203 ಸ್ಥಾನಗಳು ಲಭಿಸಿದ್ದವು. ಡಿಎಂಕೆ 31ರಿಂದ 101ಕ್ಕೆ ಡಿಎಂಕೆ ತಲುಪಲಿದೆ. ಬಿಜೆಪಿಗೆ ಇಲ್ಲಿ ವಿಧಾನಸಭೆಯ ಯಾವಸ್ಥಾನವೂ ಸಿಗುವುದಿಲ್ಲ. ಇತರರಿಗೆ ಏಳು ಸ್ಥಾನಗಳು ಲಭಿಸಲಿವೆ.
ಅಸ್ಸಾಮ್‌ನಲ್ಲಿ ಬಿಜೆಪಿ ನೇತೃತ್ವದ ಮಿತ್ರಕೂಟ 57 ಸ್ಥಾನಗಳಿಸಿ ಅಧಿಕಾರಕ್ಕೇರಲಿದೆ. ಕಾಂಗ್ರೆಸ್ 44 ಸ್ಥಾನಗಳಿಗೆ ಕುಸಿಯಲಿದೆ. ಯನೈಟೆಡ್ ಡೆಮಕ್ರಾಟಿಕ್ ಫ್ರಂಟ್ ಹತ್ತೊಂಬತ್ತು ಸ್ಥಾನಗಳಿಸಲಿದೆಇತರರಿಗೆ ಆರು ಸ್ಥಾನಗಳು ಲಭಿಸಲಿದೆ ಎಂದು ಸಿವೊಟರ್ ಸಮೀಕ್ಷೆಯ ವರದಿ ಹೇಳುತ್ತಿದೆ.







