ಎಲ್ಲ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ:ಹೈಕೋರ್ಟ್

ಚೆನ್ನೈ,ಮಾ.5: ತಮಿಳುನಾಡಿನ ಎಲ್ಲ ಖಾಸಗಿ ಶಾಲೆಗಳಲ್ಲಿ ಬೆಳಗಿನ ಸಮಾವೇಶಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ
ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಮಾಜಿ ಯೋಧ ಎನ್.ಸೆಲ್ವತಿರುಮಾಳ್ ಅವರು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಾಧೀಶ ಕಿಶನ್ ಕೌಲ್ ಮತ್ತು ನ್ಯಾ.ಎಂ.ಎಂ.ಸುಂದರೇಶ ಅವರ ಪೀಠವು,ಖಾಸಗಿ ಶಾಲೆಗಳು ತಮ್ಮ ಪಠ್ಯಕ್ರಮದ ಭಾಗವಾಗಿ ರಾಷ್ಟ್ರಗೀತೆ ಹಾಡುವುದನ್ನು ಪಾಲಿಸಬೇಕು ಎಂದು ಆದೇಶಿಸಿತು.
ತಮಿಳುನಾಡಿನಲ್ಲಿ ಎಲ್ಲ ಕೇಂದ್ರ ಸರಕಾರಿ ಶಾಲೆಗಳು ಮತ್ತು ರಾಜ್ಯ ಸರಕಾರದ ಶಾಲೆಗಳಲ್ಲಿ ಬೆಳಗಿನ ಸಮಾವೇಶದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿದೆಯಾದರೂ ವಿವಿಧ ಖಾಸಗಿ ಶಾಲೆಗಳು ಈ ಪರಿಪಾಠವನ್ನು ಅನುಸರಿಸುತ್ತಿಲ್ಲ ಎಂದು ಸೆಲ್ವತಿರುಮಾಳ್ ತನ್ನ ದೂರಿನಲ್ಲಿ ತಿಳಿಸಿದ್ದರು
Next Story





