ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆ ವಯಿಂದ ರಕ್ತದಾನ ಶಿಬಿರ

ಉಳ್ಳಾಲ. ಮಾ.05 : ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆಯ 21ನೇ ವಾರ್ಷಿಕದ ಪ್ರಯುಕ್ತ ಹಮ್ಮಿಕೊಂಡ 21ಕಾರ್ಯಕ್ರಮಗಳಲ್ಲಿ 16ನೇ ಕಾರ್ಯಕ್ರಮ ರಕ್ತದಾನ ಶಿಬಿರವು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜ್ ಮತ್ತು ಅಸ್ಪತ್ರೆಯ ಸಹಯೋಗದೊಂದಿಗೆ ಇತ್ತೀಚೆಗೆ ದೇರಳಕಟ್ಟೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಫ್ರೌಢ ಶಾಲಾ ವಠಾರದಲ್ಲಿ ನಡೆಯಿತು.
ಸಯ್ಯದ್ ಮುಹಮ್ಮದ್ ಜುನೈದ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸ್ವಾಗತ ಸಮಿತಿ ಚೇರ್‌ಮ್ಯಾನ್ ಎಚ್.ಎಚ್ ಕುಂಞ ಅಹ್ಮದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದರು.
ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಹ್ಸಾನ್ ಕರ್ನಾಟಕದ ಕನ್ವೀನರ್ ವಿ.ಯು ಇಸ್ಹಾಕ್ ಝುಹುರಿ ಸೂರಿಂಜೆ, ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಮದನಿ ಉರುಮಣೆ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಶೌಕತ್ ಅಲಿ ಸಖಾಫಿ ರೆಂಜಾಡಿ, ತಾಜುಲ್ ಉಲಮಾ ಟ್ರಸ್ಟ್ ದೇರಳಕಟ್ಟೆಯ ಉಪಾಧ್ಯಕ್ಷರುಗಳಾದ ಏಷ್ಯನ್ ಬಾವ ಹಾಜಿ, ಹಮೀದ್ ಹಾಜಿ, ಬೆಳ್ಮ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ.ಎಸ್ ಇಸ್ಮಾಯಿಲ್, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಸತ್ತಾರ್, ಸದಸ್ಯ ಕಬೀರ್ ಹಾಜಿ, ಯೇನೆಪೋಯ ರಕ್ತ ಸಂಗ್ರಹಣಾ ನಿಧಿ ಅಧಿಕಾರಿ ಡಾ. ಶರೀಫ್, ಎಸ್‌ವೈಎಸ್ ರೆಂಜಾಡಿ ಶಾಖಾಧ್ಯಕ್ಷ ಬಿ.ಎಸ್ ಬಾವುಕುಂಞ, ದೇರಳಕಟ್ಟೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಫ್ರೌಢ ಶಾಲೆಯ ಸದಸ್ಯ ಇಸ್ಮಾಯಿಲ್ ಪನೀರ್, ಪನೀರ್ ಚರ್ಚ್ ಉಪಾಧ್ಯಕ್ಷ ಫ್ರಾಂಕಿ ಕುಟಿನ್ಹಾ, ಕೆ.ಎಂ ಶರೀಫ್ ದೇರಳಕಟ್ಟೆ, ಕಾಯರ್‌ಕೇರ್ ಅಸ್ಪತ್ರೆಯ ಚೇರ್‌ಮ್ಯಾನ್ ಅಬ್ದುರ್ರಹ್ಮಾನ್, ಸ್ವಾಗತ ಸಮಿತಿ ಕೋಶಾಧಿಕಾರಿ ಶೌಕತ್ ಅಲಿ, ಎಸ್ಸೆಸ್ಸೆಫ್ ರೆಂಜಾಡಿ ಶಾಖಾಧ್ಯಕ್ಷ ಸ್ವಾಲಿಹ್ ಬಿ.ಆರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ಸೆಸ್ಸೆಫ್ ರೆಂಜಾಡಿ ಶಾಖೆ ಪ್ರ.ಕಾರ್ಯದರ್ಶಿ ಯು.ಎ ಮುಹಮ್ಮದ್ ಸಫೀರ್ ಸ್ವಾಗತಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಬಿ.ಆರ್ ವಂದಿಸಿದರು.







