ಪಾಕ್‌ಗೆ ಎಫ್-16 ಮಾರಾಟ : ಅಮೆರಿಕದ ಔಪಚಾರಿಕ ಅಧಿಸೂಚನೆ ಪಕ್ರಟ

ವಾಶಿಂಗ್ಟನ್, ಮಾ. 5: ಅಮೆರಿಕದ ಸಂಸದರು ಮತ್ತು ಭಾರತದ ತೀವ್ರ ಪ್ರತಿರೋಧದ ಹೊರತಾಗಿಯೂ, ಪಾಕಿಸ್ತಾನಕ್ಕೆ ಎಂಟು ಎಫ್-16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವುದಕ್ಕಾಗಿ ಅಮೆರಿಕ ಸರಕಾರ ಶುಕ್ರವಾರ ಕೇಂದ್ರ ಅಧಿಸೂಚನೆಯನ್ನು ಔಪಚಾರಿಕವಾಗಿ ಪ್ರಕಟಿಸಿದೆ.
‘‘ಈ ಪ್ರಸ್ತಾಪಿತ ಮಾರಾಟ ಅಮೆರಿಕದ ವಿದೇಶ ನೀತಿ ಗುರಿಗಳು ಮತ್ತು ರಾಷ್ಟ್ರೀಯ ಭದ್ರತೆ ಆಶಯಗಳಿಗೆ ಪೂರಕವಾಗಿದೆ. ದಕ್ಷಿಣ ಏಶ್ಯದ ಆಯಕಟ್ಟಿನ ಭಾಗೀದಾರನ ಭದ್ರತೆಯನ್ನು ಸುಧಾರಿಸಲು ನೆರವು ನೀಡುವ ಉದ್ದೇಶವನ್ನು ಇದು ಹೊಂದಿದೆ’’ ಎಂದು ಅಧಿಸೂಚನೆ ತಿಳಿಸಿದೆ.
ಅಧಿಸೂಚನೆಯನ್ನು ಶುಕ್ರವಾರ ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಿಸಲಾಯಿತು. ಇದರ ಜೊತೆಗೆ ಪ್ರತಿನಿಧಿ ಸದನದ ಸ್ಪೀಕರ್ ಪೌಲ್ ರಯಾನ್‌ಗೆ ರಕ್ಷಣಾ ಭದ್ರತೆ ಸಹಕಾರ ಸಂಸ್ಥೆ ಫೆಬ್ರವರಿ 11ರಂದು ಬರೆದ ಪತ್ರದ ಪ್ರತಿಯೊಂದನ್ನೂ ಪ್ರಕಟಿಸಲಾಯಿತು.
Next Story





