'ಉಬರ್-ಓಲಾ ಸಂಸ್ಥೆಗಳ ಬೈಕ್ ಟ್ಯಾಕ್ಸಿ ಸೇವೆ ಅನಧಿಕೃತ'

ಬೆಂಗಳೂರು, ಮಾ.5: ಉಬರ್ ಮತ್ತು ಓಲಾ ಸಂಸ್ಥೆಗಳು ಆ್ಯಪ್ ಮೂಲಕ ಬೈಕ್ ಟ್ಯಾಕ್ಸಿ ಆರಂಭಿಸುತ್ತಿರುವುದಾಗಿ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಆದರೆ, ಈ ಸಂಬಂಧ ಎರಡು ಸಂಸ್ಥೆಗಳು ಸಾರಿಗೆ ಪ್ರಾಧಿಕಾರದಿಂದ ಬೈಕ್ ಟ್ಯಾಕ್ಸಿ ಆರಂಭಿಸಲು ಯಾವುದೆ ಪರವಾನಗಿ ನೀಡಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಈ ಸಂಸ್ಥೆಗಳ ಬೈಕ್ ಟ್ಯಾಕ್ಸಿಗಳ ಆಚರಣೆ ಕಾನೂನುಬಾಹಿರವಾಗಿದೆ. ಅಲ್ಲದೆ, ಒಂದು ವೇಳೆ ವಾಹನಗಳು ಅಪಘಾತವಾದರೆ ವಿಮೆ ಸೌಲಭ್ಯ ದೊರೆಯುವುದಿಲ್ಲ. ಇದರಿಂದಾಗಿ, ಪರವಾನಗಿ ಪಡೆಯದೆ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ಆರಂಭಿಸಲಾಗುತ್ತಿರುವ ಬೈಕ್ ಟ್ಯಾಕ್ಸಿ ಸೇವೆ ಅನಧಿಕೃತವಾಗಿರುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತರ ಪ್ರಕಟನೆ ತಿಳಿಸಿದೆ. ಆದುದರಿಂದ, ಸಾರ್ವಜನಿಕರು ಈ ಸಂಸ್ಥೆಗಳು ನಡೆಸುವ ಟ್ಯಾಕ್ಸಿಗಳನ್ನು ಉಪಯೋಗಿಸಬಾರದು ಎಂದು ಮನವಿ ಮಾಡಿರುವ ಸಾರಿಗೆ ಇಲಾಖೆ ಆಯುಕ್ತರು, ಈ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
Next Story





