ಪರೀಕ್ಷೆ: ಸಹಾಯವಾಣಿ ಆರಂಭ

ಉಡುಪಿ, ಮಾ.5: ಮಾ.11ರಿಂದ 28ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ.
ಮಣಿಪಾಲದಲ್ಲಿರುವ ಜಿಲ್ಲಾಡಳಿತ ಸಂಕೀರ್ಣದ ಬಿ ಬ್ಲಾಕ್ ಕೊಠಡಿ ಸಂಖ್ಯೆ 308ರಲ್ಲಿರುವ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ದೂ.ಸಂ.:0820-2574916, 2574918 ಗಳನ್ನು ಸಂಪರ್ಕಿಸಬಹುದು. ಕರೆಗಳು ಪಿಯುಸಿ ವ್ಯಾಸಂಗ ಅಥವಾ ಪರೀಕ್ಷೆಗಳಿಗೆ ಮಾತ್ರ ಸಂಬಂಧಿಸಿರಬೇಕು. ಈ ಸಹಾಯವಾಣಿ ಸೇವೆ ಮಾ.8ರಿಂದ 31ರವರೆಗೆ ಲಭ್ಯ ವಿರುವುದಾಗಿ ಪ್ರಕಟನೆ ತಿಳಿಸಿದೆ.
ದ.ಕ.: ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದ.ಕ. ಜಿಲ್ಲಾ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯ ವಾಣಿ ತೆರೆಯಲಾಗಿದ್ದು, ದೂ.ಸಂ.: 0824- 2425100 ಹಾಗೂ 2426100ಗೆ ಕರೆ ಮಾಡಬಹುದು. ನಿಷೇಧಾಜ್ಞೆ: ಉಡುಪಿ ಜಿಲ್ಲೆಯಲ್ಲಿ ಮಾ.11ರಿಂದ 28 ರವರೆಗೆ ಒಟ್ಟು 29 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿವೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಆದೇಶಿಸಿದ್ದಾರೆ.





