ನವೋದಯ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪುನರಾಯ್ಕೆ

ಮಂಗಳೂರು, ಮಾ.5: ರಾಜ್ಯ ಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿರುವ ನವೋದಯ ಸೌಹಾರ್ದ ಸಹ ಕಾರಿ ನಿಯಮಿತ ಸಂಸ್ಥೆಗೆ 2016- 17ರಿಂದ 2020-21ನೆ ಅವಧಿಗೆ ಅಧ್ಯಕ್ಷರಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪುನರಾಯ್ಕೆಗೊಂಡಿದ್ದಾರೆ.
ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಹಿರಿಯ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಎಸ್. ರಾಜು ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
2016-17ರಿಂದ 2020-21ನೆ ಅವಧಿಗೆ ನಡೆದ ಚುನಾವಣೆ ಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಭಾಸ್ಕರ್ ಎಸ್. ಕೋಟ್ಯಾನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ.ಎಸ್. ದೇವರಾಜ್, ರತ್ನಾಕರ ಶೆಟ್ಟಿ, ಎಸ್. ರಾಜು ಪೂಜಾರಿ, ಸುಂದರ ಗೌಡ ಇ., ಎಂ. ವಾದಿರಾಜ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಸುನೀಲ್ ಕುಮಾರ್, ರಾಘವ ಶೆಟ್ಟಿ, ಕೆ. ಹರಿಶ್ಚಂದ್ರ, ಮೋನಪ್ಪಶೆಟ್ಟಿ, ಎಸ್. ಜಗದೀಶ್ಚಂದ್ರ, ಸಾವಿತ್ರಿ ರೈ ಕೆ., ಗುಲ್ಝಾರ್ ಹುಸೈನ್ ಹಾಗೂ ನಝೀರ್ ಹುಸೈನ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳಅಭಿವೃದ್ಧಿ ಅಧಿಕಾರಿ ಜನಾರ್ದನ ಕಾರ್ಯ ನಿರ್ವಹಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಾಸು ಸಹಕರಿಸಿದರು.







